ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿಯಲ್ಲಿ ಕುಡಿದ ಮತ್ತಿನಲ್ಲಿ ನೇಣಿಗೆ ಶರಣಾದ ಯುವಕ

ಅಣ್ಣಿಗೇರಿ : ಹೊಸ ವರ್ಷಾಚರಣೆ ಕೆಲವರಿಗೆ ಸಂತೋಷವನ್ನುಂಟು ಮಾಡಿದರೆ ಕೆಲವರಿಗೆ ದು:ಖವನ್ನುಂಟು ಮಾಡುತ್ತದೆ ಎಂಬುವದಕ್ಕೆ ಪಟ್ಟಣದಲ್ಲೊಂದು ಘಟನೆ ನಡೆದಿದೆ.

ಹೌದು. ಡಿ.31ರ ರಾತ್ರಿ ಪಟ್ಟಣದ ಗಾಂಧಿ ನಗರದ ಯುವಕ ಮಂಜುನಾಥ ಪರಸಪ್ಪ ಉಣಕಲ್ (28) ಎಂಬುವನು ಹೊಸ ವರ್ಷದ ಆಚರಣೆಯನ್ನು ಸ್ನೇಹಿತರೊಂದಿಗೆ ಖುಷಿ ಖುಷಿಯಿಂದ ಆಚರಿಸಿ ನಂತರ ಮಧ್ಯರಾತ್ರಿ ಜೀವನದಲ್ಲಿ ಜೀಗುಪ್ಸೆಗೊಂಡು ಸಿಕ್ಕಾಪಟ್ಟಿ ಮಧ್ಯವನ್ನು ಸೇವಿಸಿ ತನ್ನ ಮನೆಯ ಹಿತ್ತಲಲ್ಲಿಯೇ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡು ನೇತಾಡುತ್ತಿದ್ದ ಶವವನ್ನು ಕುಟುಂಬಸ್ಥರು ಶುಕ್ರವಾರ ಬೆಳಗಿನ ಜಾವ ನೋಡಿ ಏಕಾಏಕಿಯಾಗಿ ದಿಗ್ಬ್ರಮೆಗೊಂಡ ವಾತಾವರಣ ಸೃಷ್ಟಿಯಾಗಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ಲಾಲಸಾಬ ಜೂಲಕಟ್ಟಿ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

01/01/2021 09:06 pm

Cinque Terre

65.78 K

Cinque Terre

3

ಸಂಬಂಧಿತ ಸುದ್ದಿ