ಧಾರವಾಡ: ಅಕ್ರಮವಾಗಿ ಸಾಗವಾನಿ ಮರ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಹೊನ್ನಾಪೂರದ ಪ್ರಕಾಶ ಲಕ್ಷ್ಮಣ ಪಾಟೀಲ್ ಉರ್ಫ ಹೊಸಮನಿ (27), ರಾಮಾಪೂರದವರಾದ ಸಂತೋಷ ಫಕೀರಪ್ಪ ಶೆರಿಮನಿ (23), ದ್ಯಾಮಣ್ಣಾ ಫಕೀರಪ್ಪ ಶೆರಿಮನಿ (24), ಬಸವರಾಜ ಕರಿಯಪ್ಪ ನೀರಲಗಿ (24) ಬಂಧಿತ ಆರೋಪಿಗಳು. ಅಕ್ರಮವಾಗಿ ಧಾರವಾಡ ವಲಯ ವ್ಯಾಪ್ತಿಯ ಅರವಟಗಿ ಹಾಗೂ ಕಲಕೇರಿ ಅರಣ್ಯ ಪ್ರದೇಶದಲ್ಲಿ 1,292 ಘ.ಮೀ ಸಾಗವಾನಿ ತುಂಡುಗಳನ್ನು ಮಾರಾಟ ಮಾಡುತ್ತಿರುವಾಗ ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಅಂದಾಜು ಮೌಲ್ಯ ರೂ. 1,50,000 ಮತ್ತು ಒಂದು ದ್ವಿಚಕ್ರ ವಾಹನ, ಸಾಗಣೆಗೆ ಉಪಯೋಗಿಸಿದ ಎರಡು ಅಶೋಕ ಲೈಲೆಂಡ್-207 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಕರ್ನಾಟಕ ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿದ್ದು ಶಿಕ್ಷಾರ್ಹ. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Kshetra Samachara
01/01/2021 07:44 pm