ಧಾರವಾಡ: ಚಂದನವನದ ಪ್ರೇಮಕವಿ ಹಾಗೂ ಚಿತ್ರಸಾಹಿತಿ ಕೆ.ಕಲ್ಯಾಣ್ ಅವರ ಕೌಟುಂಬಿಕ ಕಲಹಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ತಮ್ಮ ಕೌಟುಂಬಿಕ ಕಲಹಕ್ಕೆ ಮಾಟ, ಮಂತ್ರ ಕಾರಣ. ನಮ್ಮ ಮನೆ ಕೆಲಸಕ್ಕಿದ್ದ ಗಂಗಾ ಕುಲಕರ್ಣಿ ಎಂಬಾಕೆ ನನ್ನ ಪತ್ನಿ ಹೆಸರಿನಲ್ಲಿ ಮಾಟ, ಮಂತ್ರ ಮಾಡಿಸಿ ಕೌಟುಂಬಿಕ ಕಲಹ ಉಂಟಾಗುವಂತೆ ಮಾಡಿದ್ದಾಳೆ ಎಂದು ಕೆ.ಕಲ್ಯಾಣ್ ಅವರೇ ಆರೋಪಿಸಿದ್ದಾರೆ.
ಗಂಗಾ ಕುಲಕರ್ಣಿ ಎಂಬ ಹೆಸರಿನ ಈ ಮಹಿಳೆ ಧಾರವಾಡದಲ್ಲೂ ಜ್ಯೋತಿ ಕುಲಕರ್ಣಿಯಾಗಿ ಧಾರವಾಡದ ಮಾಳಮಡ್ಡಿಯಲ್ಲಿರುವ ಧಾರವಾಡಕರ ಎಂಬುವವರ ಮನೆಯಲ್ಲಿ ಕೆಲಸಕ್ಕಿದ್ದಳು ಎಂಬ ಮಾಹಿತಿ ಗೊತ್ತಾಗಿದೆ.
ಗಂಗಾ ಕುಲಕರ್ಣಿ ಮೂಲ ಹೆಸರು ಜ್ಯೋತಿ ಕುಲಕರ್ಣಿ. ಜ್ಯೋತಿ ಎಂಬ ಹೆಸರಿನಡಿ ಧಾರವಾಡಕರ ಎಂಬುವವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಇಲ್ಲಿಯೂ ಕೂಡ ಗಂಗಾ ಊರ್ಫ್ ಜ್ಯೋತಿ ಮಾಟ, ಮಂತ್ರದ ಹೆಸರಿನಲ್ಲಿ ಮೋಸ ಮಾಡಿದ್ದಳು ಎಂಬುದು ಗೊತ್ತಾಗಿದೆ.
2016-17ರಲ್ಲಿ ಈ ಗಂಗಾ ಕುಲಕರ್ಣಿ ಜ್ಯೋತಿ ಎಂಬ ಹೆಸರಿನಲ್ಲಿ ಕೆಲಸಕ್ಕಿದ್ದಳು. ಆರು ತಿಂಗಳು ಮನೆಕೆಲಸ ಮಾಡಿ ಮೋಸ ಮಾಡಿ ಹೋಗಿದ್ದಳು. ಈಕೆ ಶಿವಾನಂದ ವಾಲಿ ಎಂಬಾತನೊಂದಿಗೆ ಸೇರಿ ಮೋಸ ಎಸಗಿದ್ದಳು. ಶಿವಾನಂದ ವಾಲಿ ಉದಿನಕಡ್ಡಿ ಸ್ವಾಮಿ ಎಂದೇ ಫೇಮಸ್ ಆಗಿದ್ದಾನೆ.
Kshetra Samachara
05/10/2020 12:03 pm