ಹುಬ್ಬಳ್ಳಿ: ದಲಿತ ಮುಖಂಡನೊಬ್ಬ ಪ್ರತಿಭಟನಾ ನಿರತ ಮುಸ್ಲಿಮರನ್ನು ಪ್ರಚೋದಿಸುವ ಭಾಷಣ ಮಾಡಿ ಗಲಾಟೆಗೆ ಮತ್ತಷ್ಟು ಕುಮ್ಮಕ್ಕು ನೀಡಿರುವ ವಿಡಿಯೋ ಒಂದು ಲಭ್ಯವಾಗಿದೆ.
ಹೌದು..ದಲಿತ ಮುಖಂಡ ಮಾರುತಿ ದೊಡ್ಡಮನಿಯಿಂದ ಪ್ರಚೋದನೆ ಭಾಷಣ ಮಾಡಿರುವುದಾಗಿ ತಿಳಿದುಬಂದಿದೆ. ಪ್ರತಿಭಟನೆ ಬಿಟ್ಟು ಕದಲದಿರಿ. ಪೊಲೀಸರ ನಿಮ್ಮ ಮೈಮುಟ್ಟಲಿ ನಮ್ಮ ತಾಕತ್ತು ತೋರಿಸೋಣ. ನಮ್ಮ ಹೋರಾಟ, ಬೆಂಗಳೂರು, ದಿಲ್ಲಿ ತಲುಪಬೇಕು. ಇದು ಅವರಪ್ಪ ಜಾಹಗಿರ್ ಅಲ್ಲ, ನಾವು ಸುಮ್ಮನೆ ಕೂಡೋದು ಬೇಡ ಎಂದು ಪ್ರಚೋದನೆ ನೀಡಿರುವ ವಿಡಿಯೋ ಲಭ್ಯವಾಗಿದೆ.
ಕಳೆದ ರಾತ್ರಿ ಠಾಣೆ ಮುಂದೆ ಜಮಾಯಿಸಿದ ಮುಸ್ಲಿಮರು. ಪ್ರಚೋದನೆ ಭಾಷಣ ಬಳಿಕ ಗಲಭೆ ಆರಂಭವಾಗಿದ್ದು, ಗಲಭೆಗೆ ತುಪ್ಪ ಸುರಿದ ದಲಿತ ಮುಖಂಡನ ಕಾರ್ಯಕ್ಕೆ ಎಲ್ಲೆಡೆಯೂ ಆಕ್ರೋಶಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/04/2022 03:49 pm