ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವ್ಯಾನಿಟಿ ಬ್ಯಾಗ್ ಟಾರ್ಗೆಟ್ ಮಾಡುತ್ತಿದ್ದ ಚಾಲಾಕಿ ಕಳ್ಳರ ಚಳಿ ಬಿಡಿಸಿದ ರೈಲ್ವೇ ಪೊಲೀಸರು

ಹುಬ್ಬಳ್ಳಿ: ಚಹಾ ಮಾರಾಟ ಮಾಡುವ ವೇಷದಲ್ಲಿ ಬರುವ ಬಹುತೇಕ ಚಾಲಾಕಿ ಕಳ್ಳರು ಮಹಿಳೆಯರ ವ್ಯಾನಿಟಿ ಬ್ಯಾಗ್ ಗೆ ಖನ್ನಾ ಹಾಕುವಂತ ಹಲವಾರು ಪ್ರಕರಣಗಳು ವಾಣಿಜ್ಯನಗರಿ ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿ ನಡೆಯುತ್ತಿವೆ.

ಹೌದು..ರಾತ್ರಿ ವೇಳೆ ಸಂಚರಿಸುವ ರೈಲುಗಳಲ್ಲಿ ಚಹಾ ಮಾರುವ ವೇಷದಲ್ಲಿ ವ್ಯಾನಿಟಿ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಚಾಲಾಕಿ ಕಳ್ಳರನ್ನು ಬಂಧಿಸುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿತರಿಂದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಮಂಟೂರ ರಸ್ತೆ ಜುಬಿಲಿ ಚರ್ಚ್ ಬಳಿಯ ನಿವಾಸಿ ಯೋಹಾನಕುಮಾರ ಪ್ರಾಂಚೀಸ್ ಕುಂರ್ದತಿ (20) ಹಾಗೂ ಪ್ರೇಮಕುಮಾರ ಅಲಿಯಾಸ್ ಚಿಂಟು ಏಸು ಸೂರ್ಯಪಲ್ಲಿ (25) ಬಂಧಿತರು.

ರೈಲ್ವೆ ಡಿವೈಎಸ್​ಪಿ ಪುಷ್ಪಲತಾ ಮಾರ್ಗದರ್ಶನದಲ್ಲಿ ರೈಲ್ವೆ ವೃತ್ತದ ಇನ್ಸ್​ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಹಾಗೂ ಪಿಎಸ್​ಐ ಸತ್ಯಪ್ಪ ಎಂ. ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

ಸಿಬ್ಬಂದಿ ಎಫ್.ಜಿ. ಪುಲ್ಲಿ, ರವಿ ವಾಲ್ಮೀಕಿ, ಪ್ರವೀಣ ಪಾಟೀಲ, ರಮೇಶ ಲಮಾಣಿ, ಸುಭಾಸ ದಳವಾಯಿ, ರಾಯಪ್ಪ ಗುಂಡಗಿ ತಂಡದಲ್ಲಿದ್ದರು.

ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

25/09/2020 02:25 pm

Cinque Terre

21.7 K

Cinque Terre

1

ಸಂಬಂಧಿತ ಸುದ್ದಿ