ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಇನ್ನೊಬ್ಬರ ಗುಲಾಮನಾಗಿ ದುಡಿಯುವುದಕ್ಕಿಂತ ಸ್ವಂತ ಕಾಲಿನ ಮೇಲೆ ನಿಂತು ಬದುಕಿನ ಬಂಡಿ ದೂಡಲು ಆಯ್ಕೆ ಮಾಡಿಕೊಂಡ ವೃತ್ತಿ ಸ್ವಂತ ಉದ್ಯೋಗ.ಬಟ್ಟೆ ಹೊಲಿಯುವುದರ ಜೊತೆಗೆ ಬಟ್ಟೆ ವ್ಯಾಪಾರ ಮಾಡಲು ಯೋಚಿಸಿ, ಬ್ಯಾಂಕ್ ನಲ್ಲಿ ಸಾಲ ಪಡೆದು ಬಟ್ಟೆ ವ್ಯಾಪಾರ ಪ್ರಾರಂಭಿಸಿ ಈಗಷ್ಟೇ ಆರು ತಿಂಗಳು ಕಳೆದಿದ್ದವು. ಅಷ್ಟೇ,ಆಗಲೇ ಬಂದೊದಗಿದ್ದು ನೋಡಿ ಬಹುದೊಡ್ಡ ಆಘಾತ.
ಹೌದು ವೀಕ್ಷಕರೆ ಮೊನ್ನೆ ಶುಕ್ರವಾರ ಮಧ್ಯರಾತ್ರಿ ಅಳ್ನಾವರ ಪಟ್ಟಣದಲ್ಲಿ ಸತೀಶ ತಿಗಡೊಳ್ಳಿ ಅವರ ಬಟ್ಟೆ ಅಂಗಡಿ ಕಳ್ಳತನ ವಾಗಿದ್ದು ಸತೀಶ ಅವರ ಬದುಕು ಅಕ್ಷರಶಃ ಬೀದಿಗೆ ಬಂದಿದೆ.ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಕಳ್ಳರು ಶಟ್ರಸ್ ಮುರಿದು ಸುಮಾರು ಎರಡು ಲಕ್ಷಕ್ಕಿಂತ ಅಧಿಕ ಮೌಲ್ಯದ ಸೀರೆಗಳನ್ನ ಮತ್ತು ಸುಮಾರು ಹದಿಮೂರು ಸಾವಿರ ರೂ ಗಳನ್ನ ದರೋಡೆ ಮಾಡಿಕೊಂಡು ಹೋಗಿದ್ದಾರೆ.
ಪಟ್ಟಣದಲ್ಲಿ ಕಳ್ಳತನ ನಡೆಯುತ್ತಿರುವುದು ಇದೆ ಮೊದಲೇನು ಅಲ್ಲ.ಈ ತರಹದ ಘಟನೆಗಳು ಸಾಕಷ್ಟು ಬಾರಿ ನಡೆದಿವೆ.ಮೊನ್ನೆ ಶುಕ್ರವಾರ ಕಳ್ಳತನ ನಡೆದದ್ದು ಪೊಲೀಸ್ ಠಾಣೆಯಿಂದ ಬಹಳ ದೂರೇನು ಇಲ್ಲ.ರಾತ್ರಿ ವೇಳೆ ಪೊಲೀಸ್ ಸಿಬ್ಬಂದಿ ಗಸ್ತು ಹೊಡೆಯುತ್ತಾರೆ.ಮುಖ್ಯ ರಸ್ತೆ ಪಕ್ಕದಲ್ಲಿಯೇ ಈ ಘಟನೆ ನಡೆದದ್ದು ನಿಜಕ್ಕೂ ಸಾಮಾನ್ಯ ಜನರ ನಿದ್ದೆಗೆಡಿಸಿದೆ.ಇನ್ನಾದರೂ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಅಳಲಾಗಿದೆ.
ಮಹಾಂತೇಶ ಪಠಾಣಿ
ಪಬ್ಲಿಕ್ ನೆಕ್ಸ್ಟ್
ಅಳ್ನಾವರ.
Kshetra Samachara
30/05/2022 01:42 pm