ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅವಳಿ ನಗರದಲ್ಲಿ ಹೈಟೆಕ್ ಕಳ್ಳರ ಹಾವಳಿ!; ಜುವೆಲ್ಲರಿ, ಎಲೆಕ್ಟ್ರಾನಿಕ್ಸ್ ಅಂಗಡಿಗಳೇ ಟಾರ್ಗೆಟ್

ವಾಣಿಜ್ಯ ನಗರಿ ಹುಬ್ಬಳ್ಳಿಗೆ ಎಂಟ್ರಿ ಕೊಟ್ಟಿದ್ದಾರೆ ಐನಾತಿ ಹೈ ಕ್ಲಾಸ್ ಕಳ್ಳರು! ಇವರ ಟಾರ್ಗೆಟ್ ಬಂಗಾರದ ಅಂಗಡಿ, ಮೊಬೈಲ್, ಎಲೆಕ್ಟ್ರಾನಿಕ್ಸ್ ಅಂಗಡಿಗಳು. ವ್ಯಾಪಾರಸ್ಥರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗುತ್ತಿದ್ದಾರೆ ಈ ಸ್ಮಾರ್ಟ್ ಕಳ್ಳ- ಕಳ್ಳಿಯರು.

ಈ ಹೈಕ್ಲಾಸ್ ಕಳ್ಳಿಯರು ಹೊರ ರಾಜ್ಯದವರು ಎನ್ನಲಾಗಿದೆ. ಶ್ರೀಮಂತ ಕುಟುಂಬದವರಂತೆ ಬಟ್ಟೆ ಧರಿಸಿಕೊಂಡು ಆಟೋ, ಕಾರಿನಲ್ಲಿ ನೇರವಾಗಿ ಅಂಗಡಿ ಮುಂದೆಯೇ ಇಳಿಯುತ್ತಾರೆ. ಈ ನಾಲ್ಕೈದು ಜನರ ತಂಡ, ಅಂಗಡಿಯಲ್ಲಿ ಖರೀದಿ ನೆಪದಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಾರೆ. ಹುಬ್ಬಳ್ಳಿ ಅಲ್ಲದೆ, ಧಾರವಾಡದಲ್ಲೂ ಕಳ್ಳಿಯರು ತಮ್ಮ ಕರಾಮತ್ತು ತೋರಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಬಂಗಾರದ ಅಂಗಡಿಗಳನ್ನೇ ಹೆಚ್ಚು ಟಾರ್ಗೆಟ್ ಮಾಡಿರುವ ಈ ಕಳ್ಳಿಯರು, ಚಿನ್ನ ಖರೀದಿಸುವ ನೆಪದಲ್ಲಿ ಮೋಸ ಮಾಡುತ್ತಿದ್ದಾರೆ. ಇನ್ನು ಮೊಬೈಲ್ ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಇದೇ ಟ್ರಿಕ್ಸ್ ಬಳಸುತ್ತಿದ್ದಾರೆ. ಇವರ ಉತ್ತಮ ಉಡುಗೆ ತೊಡುಗೆ, ಮಾತುಗಾರಿಕೆಯಿಂದ ಅಂಗಡಿಯವರೂ ಮೋಸ ಹೋಗುತ್ತಿದ್ದಾರೆ.

ಈಗಾಗಲೇ ಹುಬ್ಬಳ್ಳಿಯಲ್ಲಿ ಸರಣಿ ಕಳ್ಳತನದ ಗ್ಯಾಂಗ್ ಬೀಡು ಬಿಟ್ಟಿದ್ದು , ಹುಬ್ಬಳ್ಳಿ ಶಹರ ಠಾಣೆಯಲ್ಲಿ ಸ್ಟ್ರೀಟ್ ಅಂಗಡಿ ಸೇರಿ 8 ಅಂಗಡಿಗಳನ್ನು ಕಳ್ಳತನ ಮಾಡಿದ್ದಾರೆ. ನಂತರ ಕೇಶ್ವಾಪೂರ ಠಾಣೆ ವ್ಯಾಪ್ತಿಯಲ್ಲಿ ಪಾನ್ ಶಾಪ್ ಸೇರಿ ನಾನಾ ಅಂಗಡಿಗಳಲ್ಲಿ ಕಳ್ಳತನ ಮಾಡಲಾಗಿತ್ತು. ನಂತರ ಅಶೋಕನಗರ, ವಿದ್ಯಾನಗರ, ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂಗಡಿ, ದೇವಸ್ಥಾನ ಹಾಗೂ ಮನೆಗಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಹುಬ್ಬಳ್ಳಿ- ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ, ನಗರದ ಪ್ರಮುಖ ಭಾಗದಲ್ಲಿಯೇ ಹೆಚ್ಚು ಸರಣಿ ಕಳ್ಳತನ ಆಗುತ್ತಿವೆ. ಆದ್ದರಿಂದ ಸಾರ್ವಜನಿಕರು ಪೊಲೀಸ್ ಬೀಟ್‌ಗಳು, ಸಿಸಿ ಟಿವಿ ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ಪ್ರಶ್ನಿಸುವಂತಾಗಿದೆ. ಪೊಲೀಸರು ಇಂತಹ ಕಳ್ಳರ ಬಗ್ಗೆ ನಿಗಾಯಿರಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

- ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/08/2022 05:00 pm

Cinque Terre

67.77 K

Cinque Terre

3

ಸಂಬಂಧಿತ ಸುದ್ದಿ