ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಖಾಸಗಿ ವಿಡಿಯೋ ಸೆರೆಹಿಡಿದು ಯುವಕನಿಗೆ ಬ್ಲ್ಯಾಕ್ ಮೇಲ್

ಸ್ನೇಹಿತೆ ಜೊತೆಗಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಯುವಕನೊಬ್ಬನಿಗೆ ಹೆದರಿಸಿ ಆತನಿಂದ ಸ್ಕೂಟರ್ ಕಸಿದುಕೊಂಡು, 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದ ನಾಲ್ವರು ದುರುರಳನ್ನು ಬೆಂಡಿಗೇರಿ ಠಾಣೆಯ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಸೋನಿಯಾ ಗಾಂಧಿ ನಗರದ ಅಸ್ಪಾಕ, ಇಷಾಕ್,ಸಾಧಿಕ್, ಹಾಗೂ ರಿಯಾಜ್ ಎಂಬ ಕಿರಾತಕರೆ ಯಲ್ಲಾಪುರ ಓಣಿಯ ಆಸಿಫ ಎಂಬ ಯುವಕನಿಗೆ ನೀನು ನಿನ್ನ ಸ್ನೇಹಿತೆ ಜೊತೆ ಇರುವ ಖಾಸಗಿ ವಿಡಿಯೋ ನಮ್ಮ ಬಳಿ ಇದೆ ನೀನು ನಮಗೆ ಸ್ಕೂಟರ್ ಹಾಗೂ ಹಾಗೂ 20 ಸಾವಿರ ದುಡ್ಡು ಕೊಡಬೇಕು ಅಂತಾ ಬ್ಲ್ಯಾಕ್ ಮೇಲ್ ಮಾಡಿ ಸ್ಕೂಟರ್ ಹಾಗೂ 20 ಸಾವಿರ ದುಡ್ಡು ತೆಗೆದುಕೊಂಡು ಹೋಗಿದ್ದರು.

ಮತ್ತೆರಡು ದಿನಗಳು ಕಳೆದ ನಂತರ ಆಸಿಫ್‌ಗೆ ಕರೆಮಾಡಿದ ಆರೋಪಿಗಳು ಇನ್ನು 50 ಸಾವಿರ ದುಡ್ಡು ಕೊಡಬೇಕು ಅಂತಾ ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭ ಮಾಡಿದಾಗ, ಮಾನಸಿಕವಾಗಿ ನೊಂದ ಆಸಿಫ್ ಬೆಂಡಿಗೇರಿ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡುತ್ತಾನೆ.

ಕೂಡಲೇ ಅಲರ್ಟ್ ಆದ ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ ಶ್ಯಾಮರಾವ ಸಜ್ಜನ, ಪಿಎಸ್ಐ ಶರಣ ದೇಸಾಯಿ ಹಾಗೂ ಕ್ರೈಂ ಸಿಬ್ಬಂದಿ ಹನುಮಂತ ಫೀಲ್ಡ್‌ಗೆ ಇಳಿದು ಬ್ಲ್ಯಾಕ್ ಮೇಲ್ ಮಾಡಿದ್ದ ನಾಲ್ವರು ಆರೋಪಿಗಳನ್ನು ಹೆಡೆಮುರಿಕಟ್ಟಿ ಕಂಬಿ ಹಿಂದೆ ಕಳುಹಿಸುವ ಕಾರ್ಯವನ್ನು ಮಾಡಿದ್ದಾರೆ.

ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/08/2022 07:09 pm

Cinque Terre

90.08 K

Cinque Terre

1

ಸಂಬಂಧಿತ ಸುದ್ದಿ