ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಚರಂಡಿಯಲ್ಲಿ ಶವವಾಗಿ ಪತ್ತೆಯಾದ ಮಲ್ಲಿಕಾರ್ಜುನ : ಕುಟುಂಬಸ್ಥರ ಆಕ್ರಂದನ

ರಾತ್ರಿ ಮನೆಯಿಂದ ಹೊರ ಹೋದ ವ್ಯಕ್ತಿಯೊಬ್ಬ ಬೆಳಗಾಗುವಷ್ಟರಲ್ಲಿ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ನಡೆದಿದೆ.

ಅಮ್ಮಿನಭಾವಿ ಗ್ರಾಮದ ಅಂದಾಜು 43 ವರ್ಷ ವಯಸ್ಸಿನ ಮಲ್ಲಿಕಾರ್ಜುನ ಗೂಳದಕೊಪ್ಪ ಎಂಬಾತನೇ ಮೃತಪಟ್ಟ ದುರ್ದೈವಿ.

ನಿನ್ನೆ ರಾತ್ರಿ ಮನೆಯಿಂದ ಹೊರ ಹೋಗಿದ್ದ ಈತ, ಬೆಳಗಾಗುವಷ್ಟರಲ್ಲಿ ಗ್ರಾಮದ ಗ್ರಾಮ ದೇವಿ ದೇವಸ್ಥಾನ ಬಳಿಯ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಅರೆನಗ್ನ ಸ್ಥಿತಿಯಲ್ಲಿರುವ ಶವ ಕಂಡು ಆತನ ಕುಟುಂಬಸ್ಥರು ರೋದಿಸತ್ತಿದ್ದಾರೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/06/2022 12:21 pm

Cinque Terre

115.58 K

Cinque Terre

3

ಸಂಬಂಧಿತ ಸುದ್ದಿ