ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಕ್ಕನ ಕಳ್ಳಾಟಕ್ಕೆ ಬಿತ್ತು ತಮ್ಮನ ಹೆಣ; ಕಾಮವೇ ನೀನೆಷ್ಟು ಕ್ರೂರಿ.‌!

ಆತ ಒಂದು ವರ್ಷದ ಹಿಂದಷ್ಟೇ ಹಸೆಮಣೆ ಏರಿದ್ದ. ಹೆಂಡತಿ ಮೂರು ತಿಂಗಳ ಗರ್ಭಿಣಿ. ಹೀಗೆ ಈಗಷ್ಟೇ ಸಂಸಾರನೌಕೆ ಆರಂಭಿಸಿದ್ದವನ ಬಾಳಲ್ಲಿ ನಡೀಬಾರದ್ದು ನಡೆದೇ ಹೋಗಿತ್ತು. ಅವರಿಬ್ಬರ ಪಲ್ಲಂಗ ಪುರಾಣಕ್ಕೋಸ್ಕರ ಈತನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಅಸಲಿಗೆ ಅವನ ಪ್ರಾಣ ತೆಗೆದಿದ್ದಾದ್ರೂ ಯಾರು ಅನ್ನೋದನ್ನ ಹೇಳ್ತಿವಿ ಈ ಸ್ಟೋರಿ ನೋಡಿ...

ಹೀಗೆ ಶವವಾಗಿ ಮಲಗಿರುವ ವ್ಯಕ್ತಿ 35 ವರ್ಷದ ಶಂಭು ಕಮಡೊಳ್ಳಿ. ತಾನಾಯಿತು ತನ್ನ ಕೆಲಸ ಆಯ್ತು ಎಂದುಕೊಂಡ ಹೊಲ ಮನೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಈತ. ಮೊನ್ನೆಯಷ್ಟೆ ಈತ ಕೊಲೆಯಾಗಿದ್ದ. ಈ ಕೊಲೆಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಹೊರವಲಯದಲ್ಲಿ. ನೂಲ್ವಿ ಹಾಗೂ ಅದರಗುಂಚಿ ಗ್ರಾಮದ ಮಧ್ಯದಲ್ಲಿರುವ ರಸ್ತೆ ಪಕ್ಕದಲ್ಲಿಯೇ ಶಂಭು ಕಮಡೊಳ್ಳಿ ಎಂಬಾತನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಅಲ್ದೆ, ಕೌಟುಂಬಿಕ ಕಲಹ, ಆಸ್ತಿ ವ್ಯಾಜ್ಯದ ಹಿನ್ನೆಲೆಯಲ್ಲಿಯೇ ಕೊಲೆ ಮಾಡಲಾಗಿದೆ ಎಂಬುವಂತ ಶಂಕೆ ಪೊಲೀಸರಿಗೆ ವ್ಯಕ್ತವಾಗಿತ್ತು. ಆದ್ರೆ ಕೊಲೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿದ್ದು ಈತನ ಅಕ್ಕ ಬಸಣ್ಣೆವ್ವ ನರಸಣ್ಣವರ ಹಾಗೂ ಆಕೆಯ ಪ್ರಿಯಕರ ಚನ್ನಪ್ಪ ಮರೆಪ್ಪನವರ.

ಅಕ್ರಮ ಸಂಬಂಧಕ್ಕೆ ತಮ್ಮನೇ ಅಡ್ಡಿಯಾಗಿದ್ದಾನೆ ಎಂದು ಆಕ್ರೋಶಗೊಂಡ ಅಕ್ಕ ಬಸವ್ವ ಹಾಗೂ ಆಕೆಯ ಪ್ರಿಯಕರ ಚನ್ನಪ್ಪ, ಶಂಭುಲಿಂಗನನ್ನ ಬರ್ಬರವಾಗಿ ಕೊಂದಿದ್ರು. ಚನ್ನಪ್ಪಗೌಡ ಹಾಗೂ ಬಸವ್ವ ಇಬ್ಬರಿಗೂ ಮೊದಲೇ ಪರಿಚಯವಿತ್ತು. ಬಸವ್ವನ ಪತಿ ಸುಮಾರು ಹತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದ. ಹೀಗಾಗಿ ಅದೇ ಗ್ರಾಮದ ಚನ್ನಪ್ಪಗೌಡ ಹಾಗೂ ಬಸವ್ವ ಇಬ್ಬರೂ ಹಲವು ದಿನಗಳಿಂದ ಅನೈತಿಕ ಸಂಬಂಧ ಹೊಂದಿದ್ರು. ಇದು ಬಸವ್ವನ ತಮ್ಮ ಶಂಭುಲಿಂಗನಿಗೆ ಗೊತ್ತಾಗಿತ್ತು. ಇದೇ ವಿಚಾರವಾಗಿ ಹಲವು ಬಾರಿ ರಾಜಿ ಪಂಚಾಯಿತಿ ನಡೆದಿತ್ತಾದರೂ ಇವ್ರು ಲವ್ವಿ ಡವ್ವಿ ಬಿಟ್ಟಿರ್ಲಿಲ್ಲ.

ಶಂಭುಲಿಂಗನನ್ನು ಕೊಂದ್ರೆ ಹಾಯಾಗಿ ಇರಬಹುದು ಎಂದು ಆತನ ಅಕ್ಕ ಬಸವ್ವ ಹಾಗೂ ಚನ್ನಪ್ಪಗೌಡ ಸಂಚು ರೂಪಿಸಿ, ಚನ್ನಪ್ಪಗೌಡ ಮದ್ಯ ಸೇವಿಸಿ ಶಂಭುಲಿಂಗನ ಜತೆ ಜಗಳ ತೆಗೆದಿದ್ದ. ಬಳಿಕ ಕಲ್ಲಿನಿಂದ ತಲೆಗೆ ಜಜ್ಜಿ, ಮನಬಂದಂತೆ ಎಲ್ಲೆಂದರಲ್ಲಿ ಕೈಯಿಂದ ಹೊಡೆದು ಕೊಲೆಗೈದಿದ್ದ.

ಇನ್ನು ಕೊಲೆ ನಡೆದ ಕೇವಲ 24 ಗಂಟೆಗಳಲ್ಲಿ ಪ್ರಕರಣವನ್ನ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಟ್ಟು ಹುಟ್ಟುತ್ತ ಸಹೋದರ, ಸಹೋದರಿಯರು. ಬೆಳೆಯುತ್ತ ದಾಯಾದಿಗಳು ಅನ್ನೋ ಮಾತು ಮತ್ತೊಮ್ಮೆ ರುಜುವಾತಾಗಿದೆ. ಗಂಡ, ಮಗನನ್ನ ಕೆಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈ ತೊಳಿತಿದ್ರೆ, ಆರೋಪಿಗಳು ಕಂಬಿ ಎಣಿಸ್ತಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/05/2022 06:11 pm

Cinque Terre

174.99 K

Cinque Terre

7

ಸಂಬಂಧಿತ ಸುದ್ದಿ