ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಸ್ಮಾರ್ಟ್ ಯೋಜನೆ ಅಡಿಯಲ್ಲಿ, ಹುಬ್ಬಳ್ಳಿಯ ವಿವಿಧ ಭಾಗಗಳಲ್ಲಿ ಪಬ್ಲಿಕ್ ಬೈಸಿಕಲ್ ಸಿಸ್ಟಮ್ ನ್ನು ನಿರ್ಮಾಣ ಮಾಡಿದ್ದಾರೆ. ಆದ್ರೆ ಕೆಲವು ಕಿಡಿಗೇಡಿ ಯುವಕರು ರಾತ್ರಿ ವೇಳೆ ಬೈಸಿಕಲ್ ನಿಲ್ದಾಣಕ್ಕೆ ಹೋಗಿ ಮಷೀನ್ ಗಳನ್ನು ಜಖಂ ಗೊಳಿಸುತ್ತಿರುವ ವಿಡಿಯೋ ಈಗ ಸಿಸಿಟಿವಿ ಯಲ್ಲಿ ಸೇರೆಯಾಗಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರದ ತೋಳನಕೇರಿ ಬಳಿ ನಿರ್ಮಿಸಲಾಗಿರುವ ಸೈಕಲ್ ಡಾಕಿಂಗ್ ಸ್ಟೇಷನ್ ನಲ್ಲಿ, ಜುಲೈ 2 ರಂದು ರಾತ್ರಿ 8:34 ಕ್ಕೆ ನಾಲ್ಕು ಜನ ಯುವಕರು ಮಾತನಾಡುತ್ತ ನಿಂತು, ಅಲ್ಲಿದ್ದ ಮಷೀನ್ ಒಂದನ್ನು ಕಲ್ಲಿನಿಂದ ಜಜ್ಜಿ ಒಡೆದು ಜಖಂ ಗೊಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಎಲ್ಲ ಘಟನೆಗಳು ಸಿ ಸಿ ಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸೊಕೊಂಡಿರುವ ಗೋಕುಲ್ ಪೊಲೀಸ ಠಾಣೆ ಪೊಲೀಸರು ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/07/2022 05:09 pm