ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಸಿಡಿಲು ಬಡಿದು ಗ್ರಾ.ಪಂ ಸದಸ್ಯ ಸಾವು

ನವಲಗುಂದ : ನವಲಗುಂದ ತಾಲ್ಲೂಕಿನ ಹಾಲಕುಸುಗಲ್ ಗ್ರಾಮದಲ್ಲಿ ಸುರಿಯುತ್ತಿದ್ದ ಮಳೆಯಿಂದ ಆಶ್ರಯ ಪಡೆಯಲು ಮರದ ಕೆಳಗೆ ನಿಂತ ಗ್ರಾ.ಪಂ ಸದಸ್ಯರೊಬ್ಬರಿಗೆ ಸಿಡಿಲು ಹೊಡೆದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.

ಹಾಲಕುಸುಗಲ್ ಗ್ರಾಮದ 46 ವರ್ಷದ ವಿರೂಪಾಕ್ಷಪ್ಪಾ ಸಣ್ಣದ್ಯಾಮಪ್ಪ ಧಾರವಾಡ ಎಂಬುವವರೇ ಸಾವಿಗಿಡಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಗ್ರಾಮದ ಹೊರ ವಲಯದಲ್ಲಿನ ಜಮೀನಲ್ಲಿ ಕೃಷಿ ಚಟುವಟಿಕೆಗೆಂದು ತೆರಳಿದ್ದ ವೇಳೆ ಮಳೆ ಸುರಿಯಲು ಆರಂಭಿಸಿದೆ. ಮರವೊಂದರ ಕೆಳಗೆ ಆಶ್ರಯ ಪಡೆಯಲು ಮುಂದಾದ ವೇಳೆ ಸಿಡಿಲು ಬಡಿದಿದೆ ಎನ್ನಲಾಗಿದೆ.

ಮೃತ ವ್ಯಕ್ತಿಯ ದೇಹವನ್ನು ನವಲಗುಂದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

31/08/2022 06:32 pm

Cinque Terre

46.52 K

Cinque Terre

1

ಸಂಬಂಧಿತ ಸುದ್ದಿ