ಹುಬ್ಬಳ್ಳಿಯ ಉಣಕಲ್ ಕೆರೆ ಪ್ರಸಿದ್ಧ ಪ್ರವಾಸಿ ತಾಣ ಆದರೆ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರ ನಿರ್ಲಕ್ಷದಿಂದ ಇದೀಗ ಉಣಕಲ್ ಕೆರೆ ಹೆಸರು ಹಾಳಾಗಿದ್ದು ಸೂಸೈಡ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಒಂದು ತಿಂಗಳ ಅವಧಿಯಲ್ಲಿ 4 ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣ ಉಣಕಲ್ ಕೆರೆಯಲ್ಲಿ ಪತ್ತೆಯಾಗಿದ್ದು ಇದಕ್ಕೆ ಕಾರಣವಾಗಿದೆ. ಮಗ ಜೈಲು ಸೇರಿದ ಕಾರಣಕ್ಕೆ ನೊಂದಿದ್ದ ತಾಯಿ, ಸಾಲ ಬಾಧೆಯಿಂದ ಕಂಗೆಟ್ಟಿದ್ದ ವ್ಯಕ್ತಿ, ಮದುವೆ ಆಗಿಲ್ಲ ಎಂದು ಕೆರೆಗೆ ಹಾರಿದ್ದ ಯುವಕನ ಸಾವು. ಹೀಗೆ ಸಾಲು ಸಾಲು ಸಾವಿನ ಸುದ್ದಿ ಮರೆಯುವದರೊಳಗಾಗಿ ಇದೀಗ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಷ್ಟೆಲ್ಲ ಸರಣಿ ಆತ್ಮಹತ್ಯೆ ನಡೆಯುತ್ತಿದ್ದರೂ ಹು-ಧಾ ಪಾಲಿಕೆ ಅಧಿಕಾರಿಗಳು ಅಕ್ಷರಶಃ ಕಣ್ಮುಚ್ಚಿ ಕುಳಿತುತ್ತಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆ, ಪಾಲಿಕೆ ಯೋಜನೆಯಲ್ಲೂ ಈಗಾಗಲೇ ಉಣಕಲ್ ಕೆರೆಗೆ ನೂರಾರು ಕೋಟಿ ವೆಚ್ಚ ಮಾಡಲಾಗಿದೆ. ಆದ್ರೆ ಕೆರೆ ಸುತ್ತಮುತ್ತ ಸೆಕ್ಯೂರಿಟಿ ಗಾರ್ಡ್, ಸಿಸಿಟಿವಿ ಅಥವಾ ತಡೆ ಗೋಡೆಯ ಕಾರ್ಯ ಮಾಡದೆ ಇರುವುದೇ ಸರಣಿ ಆತ್ಮಹತ್ಯೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಸದ್ಯ ವಿದ್ಯಾನಗರ ಪೊಲೀಸರಿಗೂ ಕೂಡ ಕೆರೆಯಲ್ಲಿ ನಡೆಯುತ್ತಿರುವ ಆತ್ಮಹತ್ಯೆಗಳ ಬಗ್ಗೆ ಆತಂಕ ಶುರುವಾಗಿದ್ದು ಹಿರಿಯ ಅಧಿಕಾರಿಗಳ ಮುಂದೆ ಈ ವಿಷಯ ಗಮನಕ್ಕೆ ತಂದಿದ್ದಾರೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/08/2022 06:06 pm