ಹುಬ್ಬಳ್ಳಿ: ಬೇರೆ ಮನೆಯಿಂದ ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ ಸಂಬಂಧಿಕರ ಮಟನ್ ಅಂಗಡಿಯಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಹಳೇಹುಬ್ಬಳ್ಳಿಯ ಮೆಹಬೂಬ್ ನಗರದಲ್ಲಿ ಈಗಷ್ಟೇ ನಡೆದಿದೆ.
ಅಶ್ಫಾಕ್ ಬೇಪಾರಿ (40) ಮೃತ ವ್ಯಕ್ತಿಯಾಗಿದ್ದು, ನಿನ್ನೇ ಹುಬ್ಬಳ್ಳಿಯ ಮೆಹಬೂಬ ನಗರದಲ್ಲಿನ ಬೇಪಾರಿ ಎಂಬುವರ ಮನೆಗೆ ಬಂದಿದ್ದ. ನಿನ್ನೆವರೆಗೂ ಚೆನ್ನಾಗಿಯೇ ಇದ್ದ ವ್ಯಕ್ತಿ, ಇಂದು ಮಧ್ಯಾಹ್ನ ಸಂಬಂಧಿಕರ ಮಟನ್ ಅಂಗಡಿಯಲ್ಲಿಯೇ ಅನುಮಾನಾಸ್ಪದವಾಗಿ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.
ಇನ್ನು ಮೂಲತಃ ಬೈಲಹೊಂಗಲದ ಬೆಳವಡಿ ಗ್ರಾಮದವನಾದ ಈತ ಹುಬ್ಬಳ್ಳಿಯಲ್ಲಿ ಮಾಂಸದ ವ್ಯಾಪಾರ ನಡೆಸುತ್ತಿದ್ದ, ಆದರೆ ನಿನ್ನೆ ಊರಿಂದ ಬಂದ ಅಶ್ಫಾಕ್ ಇಂದು ಹೆಣವಾಗಿದ್ದಾನೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈಗಾಗಲೇ ಸ್ಥಳಕ್ಕೆ ಅಪರಾಧ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ್ ಹಾಗೂ ಹಳೇಹುಬ್ಬಳ್ಳಿ ಠಾಣೆಯ ಪೋಲಿಸರು ಭೇಟಿ ನೀಡಿಪರಿಶೀಲನೆ ಕೈಗೊಂಡಿದ್ದಾರೆ. ಇದು ಕೊಲೆಯೋ ಅನುಮಾನಾಸ್ಪದ ಸಾವೋ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/10/2022 05:13 pm