ಹುಬ್ಬಳ್ಳಿ: ಹಣ ಎಂದ್ರೆ ಸಾಕು ಹೆಣ ಕೂಡಾ ಬಾಯಿ ಬಿಡುವ ಕಾಲ ಇದು. ಇಂತಹ ಕಾಲದಲ್ಲಿ ಹಣದ ಮುಂದೆ ಸಂಬಂಧಕ್ಕೆ ಬೆಲೆ ಎಲ್ಲಿ ಹೇಳಿ? ಹೀಗಾಗಿಯೇ ಹಣದ ಹಾಗೂ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಆಸಾಮಿಯೊಬ್ಬ ತನ್ನ ಸಹೋದರ ಸಂಬಂಧಿಗಳ ಮೇಲೆಯೇ ತನ್ನ ಸಹಚರರೊಂದಿಗೆ ತಲ್ವಾರ್ ಹಾಗೂ ಲಾಂಗ್‌ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಸದ್ಯ ಹಂತಕರ ಪಡೆಯನ್ನು ಹೆಡೆಮುರಿ ಕಟ್ಟುವಲ್ಲಿ ಹುಬ್ಬಳ್ಳಿಯ ಪೊಲೀಸರು ಯಶಸ್ವಿಯಾಗಿದ್ದಾರೆ. ಅಷ್ಟಕ್ಕೂ ಯಾವ ಹಣ? ಯಾವ ದ್ವೇಷ? ಯಾವ ಅಸೂಯೆ? ಅಂತೀರಾ..ಹೇಳ್ತೀವಿ ಕೇಳಿ
ಒಂದೆಡೆ ವಾಹನಗಳ ಮೇಲೆ ಚಿಮ್ಮಿದ ರಕ್ತ, ಪುಡಿಪುಡಿಯಾದ ವಾಹನದ ಗ್ಲಾಸ್‌ಗಳು ಇನ್ನೊಂದೆಡೆ ಆಸ್ಪತ್ರೆಯ ಬೆಡ್ ಮೇಲೆ ತಲ್ವಾರ್‌ನಿಂದ ಹಲ್ಲೆಗೊಳಗಾಗಿ ಸಾವು ಬದುಕಿನ ನಡುವೆ ಹೋರಾಡಿ ಬದುಕಿ ಬಂದ ಇವರು ಹುಬ್ಬಳ್ಳಿಯ ಕಟಕರ ಓಣಿಯ ಬೆಪಾರಿ ಸಹೋದರರಾದ ಉವೇಜ್ ಹಾಗೂ ಆವೇಜ್. ದನಗಳ ಸಾಗಾಟ ಮಾಡುವ ಬ್ಯುಸಿನೆಸ್ ಮಾಡಿಕೊಂಡು ಜೀವನ ಮಾಡ್ತಿದ್ರು. ಆದ್ರೆ ಇವರ ಏಳಿಗೆಯನ್ನು ಸಹಿಸದೆ ಇವರ ಸೋದರ ಸಂಬಂಧಿಯಾದ ಜುನೇದ ಎಂಬಾತ ತನ್ನ ಸಹಚರರ ಜೊತೆ ಸೇರಿ ಕಟಕರ ಓಣಿಯಲ್ಲಿ ಬೇಪಾರಿ ಸಹೋದರರ ಮೇಲೆ ಖಾರದ ಪುಡಿ ಎರಚಿ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಹೀಗಂತ ಹಲ್ಲೆಗೊಳಗಾದ ಬೆಪಾರಿ ಸಹೋದರರ ತಂದೆ ಘಟನೆಯ ಕುರಿತು ಹೇಳಿದ್ದು ಹೀಗೆ.
ಕಟಕರ ಓಣಿಯಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯರು ಮನೆಯಿಂದ ಹೊರಬರಲು ಭಯಪಡುವಂತ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಪೊಲೀಸ್ ಕಮೀಷನರ್ ಲಾಬುರಾಮ್ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದರು, ಸದ್ಯ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿದ ಕಸಬಾಪೇಟ ಠಾಣೆಯ ಪಿಎಸ್‌ಐ ವಿಶ್ವನಾಥ ನೇತೃತ್ವದ ತಂಡ ಆರೋಪಿಗಳನ್ನು ಕಂಬಿ ಹಿಂದೆ ಅಟ್ಟುವಲ್ಲಿ ಯಶಸ್ವಿಯಾಗಿದೆ.
ಸಂಬಂಧಗಳಲ್ಲಿ ಹಣಕಾಸಿನ ವ್ಯವಹಾರ ಮಾಡಿ ಮನಸ್ತಾಪ ಬಂದಾಗ ಶಾಂತವಾಗಿ ಕೂತು ಬಗೆಹರಿಸಿಕೊಳ್ಳುದು ಬಿಟ್ಟು, ಕಾನೂನನ್ನು ಕೈಗೆ ತೆಗೆದುಕೊಂಡು ಕೆಲವರು ಜೈಲು ಸೇರಿದ್ರೆ, ಸಂಬಂಧಗಳಲ್ಲಿ ವ್ಯವಹಾರ ಮಾಡಿದ ತಪ್ಪಿಗೆ ಸಹೋದರರಿಬ್ಬರು ಆಸ್ಪತ್ರೆ ಸೇರಿದ್ದು ಮಾತ್ರ ದುರಂತವೇ ಸರಿ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/10/2022 04:39 pm