ಹುಬ್ಬಳ್ಳಿ: ನಗರದ ಹೃದಯ ಭಾಗದಲ್ಲಿಯೇ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಘಟನೆ ಶನಿವಾರ ಮಧ್ಯರಾತ್ರಿ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ಚೆನ್ನಮ್ಮ ವೃತ್ತ ಮುಂಭಾಗದಲ್ಲಿರುವ ಸಂಗಮ ಲಾಡ್ಜ್‌ನ ರೂಮ್ ನಂಬರ್ 201ರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಉಪನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರವಿಚಂದ್ರ ದಾಳಿಯನ್ನು ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸರು ದಾಳಿ ಮಾಡುತ್ತಿದ್ದಂತೆ ಲಾಡ್ಜ್ ಮ್ಯಾನೇಜರ್ ಹಾಗೂ ಗ್ರಾಹಕರನ್ನು ಕರೆತರುತ್ತಿದ್ದ ಮಹಿಳೆ ಲಾಡ್ಜ್‌ನಿಂದ ಪರಾರಿಯಾಗಿದ್ದಾರೆ.
ಇನ್ನು ಹಳೇ ಬಸ್ ನಿಲ್ದಾಣದ ಬಳಿ ಬೇರೆ ಊರುಗಳಿಂದ ಬರುವ ಪುರುಷರನ್ನು ಟಾರ್ಗೆಟ್ ಮಾಡಿ ಹಡುಗಿಯರು ಇದ್ದಾರೆ, ಬೇಕಾ ಎಂದು ಗ್ರಾಹಕರನ್ನು ಕುದುರಿಸಲು ಕೆಲವು ಆಂಟಿಯರು ಹಳೇ ಬಸ್ ನಿಲ್ದಾಣದ ಬಳಿಯಲ್ಲಿ ನಿಂತಿರುತ್ತಾರೆ ಎಂದು ಬೇರೆ ಊರಿನಿಂದ ಬಂದಿದ್ದ ಯುವಕನೊಬ್ಬ ತನಗಾದ ಅನುಭವವನ್ನು ಹೇಳಿಕೊಂಡಿದ್ದು ಹೀಗೆ.
ಇಷ್ಟು ದಿನಗಳ ಕಾಲ ಬಂದ್ ಆಗಿದ್ದ ವೇಶ್ಯಾವಾಟಿಕೆ ಜಾಲದ ದಂಧೆ ಮತ್ತೆ ಸದ್ದಿಲ್ಲದೇ ಶುರುವಾಗಿದೆಯಾ? ಎಂಬ ಹಲವು ಅನುಮಾನಗಳು ಇದೀಗ ಮತ್ತೆ ಮೂಡಲಾರಂಭಿಸಿದ್ದು, ಹುಬ್ಬಳ್ಳಿ ಪೊಲೀಸರು ಇಂತಹ ಅಕ್ರಮಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/10/2022 07:56 am