ಧಾರವಾಡ: ಧಾರವಾಡದ ಜೆಎಸ್‌ಎಸ್ ಕಾಲೇಜು ಬಳಿ ನಡೆದಿದೆ ಎನ್ನಲಾದ ಚಾಕು ಇರಿತ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಕಾಂಗ್ರೆಸ್ ಮುಖಂಡ ಮನೋಜ ಕರ್ಜಗಿ ಮಾಲಿಕತ್ವದ 'ಲೆ ಮೊರ್ಜ್' ಎಂಬ ಹೆಸರಿನ ಸೆಲ್ಯೂನ್ ಹಾಗೂ ಸ್ಪಾ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳೊಂದಿಗೆ ಮನೋಜ ಕರ್ಜಗಿ ಅಸಭ್ಯವಾಗಿ ನಡೆದುಕೊಂಡಿದ್ದೇ ಈ ಘಟನೆಗೆ ಕಾರಣ ಎಂದು ಯುವತಿ ನೀಡಿದ ದೂರಿನಿಂದ ತಿಳಿದು ಬಂದಿದೆ.
ಯುವತಿಯೊಂದಿಗೆ ಮನೋಜ ಕರ್ಜಗಿ ಅಸಭ್ಯವಾಗಿ ನಡೆದುಕೊಂಡ ವಿಷಯವನ್ನು ಆಕೆ ತನ್ನ ಸ್ನೇಹಿತರಿಗೆ ಫೋನ್ ಮಾಡಿ ತಿಳಿಸಿದ್ದರಿಂದ ಅಲ್ಲಿಗೆ ಹೋದ ಎತ್ತಿನಗುಡ್ಡದ ಮನು ಗುಡದೂರ ಹಾಗೂ ಉದಯ ಎನ್ನುವವರು ಮೊದಲು ಮನೋಜ ಕರ್ಜಗಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಬಿಡಿಸಲು ಬಂದ ಅಯಾನ್ ಎಂಬಾತನ ಮೇಲೂ ಅವರು ಹಲ್ಲೆ ನಡೆಸಿದ್ದಾರೆ. ತಳ್ಳಾಟ ನೂಕಾಟದಲ್ಲಿ ಅಯಾನ್ ಎಂಬಾತನ ಬೆನ್ನಿಗೆ ಗಾಜು ತಾಕಿದೆ ಎಂದು ತಿಳಿದು ಬಂದಿದೆ. ಆದರೆ, ಆ ಏಟು ರೇಡಿಯಂ ಕಟರ್‌ನಿಂದಾದ ಗಾಯ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ವಿದ್ಯಾಗಿರಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
17/09/2022 11:04 pm