ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ನ ಪೊಲೀಸರಿಗೆ ವಾಹನ ಕೊಟ್ಟಿರುವುದು ಗಸ್ತು ತಿರುಗುವುದಕ್ಕೋ ಅಥವಾ ಸುಮ್ಮನೆ ರೌಂಡ್ಸ್ ಮಾಡುವುದಕ್ಕೋ ಒಂದು ಕೂಡ ಅರ್ಥವಾಗುತ್ತಿಲ್ಲ. ಕಣ್ಣ ಮುಂದೆ ಚೋರನಿದ್ದರೂ ಕಣ್ಣು ಮುಚ್ಚಿ ಕುಳಿತಿರುವುದನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಮಾಧ್ಯಮಕ್ಕೆ ನೀಡಿದ್ದಾರೆ.
ಹುಬ್ಬಳ್ಳಿ ಆಯಕಟ್ಟಿನ ಸ್ಥಳದಲ್ಲಿಯೇ ಕಳ್ಳತನ ನಡೆದಿದ್ದರೂ ಕಾರಿನ ಒಳಗೆ ಬೆಚ್ಚಗೆ ಕುಳಿತಕೊಂಡ ಪೊಲೀಸರ ನಡೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಜೀಪ್ ಸಮೀಪದಲ್ಲಿನ ಪಾನ್ ಶಾಪ್ ನಲ್ಲಿ ಹಾಡಹಗಲೇ ಕಳ್ಳತನವಾಗಿದ್ದರೂ ಡೋಂಟ್ ಕೇರ್ ಎಂದಿದ್ದಾರೆ. ಇನ್ನು, ಅದೇ ಕಳ್ಳ ಕಳ್ಳತನ ಮಾಡಿ ತಗಲು ಹಾಕಿಕೊಂಡಿದ್ದು, ಆಗ ನಡು ರಸ್ತೆಯಲ್ಲಿ ಜನರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಪಕ್ಕದಲ್ಲಿಯೇ ಪೊಲೀಸರಿದ್ದರೂ ಕ್ಯಾರೇ ಎಂದಿಲ್ಲ.
ಟೀ ಕೊಡುವ ನೆಪದಲ್ಲಿ ಪಾನ್ ಶಾಪ್ ನ ಗಲ್ಲಾ ಪೆಟ್ಟಿಗೆಯಿಂದ ಸಾವಿರಾರು ರೂಪಾಯಿ ಕಳ್ಳತನ ಮಾಡಿದ ಯುವಕ ಕಳ್ಳತನ ಮಾಡಿದ ಸ್ಥಳದಲ್ಲಿಯೇ ಸಿಕ್ಕಿಬಿದ್ದಿದ್ದು, ಇಂತಹ ದುಷ್ಕೃತ್ಯ ನಡೆದಿದ್ದರೂ ಹುಬ್ಬಳ್ಳಿ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಪೊಲೀಸರ ಉದಾಸೀನತೆಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Kshetra Samachara
14/09/2022 08:24 pm