ಕುಂದಗೋಳ: ಮಹಾರಾಷ್ಟ್ರದ ಕೊಲ್ಹಾಪುರದಿಂದ ಲಾರಿಯನ್ನ ಕದ್ದು ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ರಸ್ತೆಯ ಮೂಲಕ ಸಾಗಾಟ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಕುಂದಗೋಳ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸರು ದಾಳಿ ಮಾಡಿ ಆರೋಪಿ ಸಮೇತ ಲಾರಿಯನ್ನ ವಶಕ್ಕೆ ಪಡೆದುಕೊಂಡಿದ್ದು ಮುಂದಿನ ವಿಚಾರಣೆ ಕೈಗೊಂಡಿದ್ದಾರೆ. ಮಹಾರಾಷ್ಟ್ರದಿಂದ ಲಾರಿಯನ್ನು ಎಗರಿಸಿದ ಕಳ್ಳ ವಾಹನದ ನಂಬರ್ ಪ್ಲೇಟ್‌ಗೆ ಹಳದಿ ಬಣ್ಣ ಬಳಿದು, ವಾಹನ ಬಿಡಿ ಭಾಗಗಳನ್ನು ಹಾಗೂ ವಾಹನದ ಇಂಜಿನ್ ಚಸ್ಸಿ ನಂಬರ್ ಬದಲಾವಣೆ ಮಾಡಿ ಮಾರಾಟ ಮಾಡುವ ದುರುದ್ದೇಶದಿಂದ ಲಾರಿ ಕಳ್ಳತನ ಮಾಡಿದ್ದ ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ತಿಳಿದ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಮಾರುತಿ ಗುಳ್ಳಾರಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, ಜಿಲ್ಲಾ ಉಪಾಧೀಕ್ಷಕರಾದ ಎಸ್.ಎಂ ಸುಂಕದ, ಮಾರ್ಗದರ್ಶನದಲ್ಲಿ ಕುಂದಗೋಳ ಠಾಣಾ ಎಎಸ್ಐ ಎಂ.ಆರ್ ರಾಮನಾ, ಸಿ.ಎಸ್ ಬಡಿಗೇರ, ಎಂ.ಎಸ್.ಜೋಡಗೇರಿ, ಬಿ.ಎ ಶಿರಕೋಳ, ಸಾವಿತ್ರಿ ಶಿಂತ್ರಿ, ಅಮರೇಶ ಬಳಗಾರ, ಪರಮೇಶ ಗೊಂದಿ, ಎಸ್.ಡಿ ಕಳಾವಂತ ಹಾಗೂ ನಾಗರಾಜ ಹೊಸಕೇರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/09/2022 10:43 am