ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬುಲೆಟ್ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ.

ಹುಬ್ಬಳ್ಳಿ: ನಗರದಲ್ಲಿ ಬುಲೆಟ್ ಬೈಕ್‌ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಬೆಂಡಿಗೇರಿ ಠಾಣೆಯ ಪೊಲೀಸರು ಬಲೆಗೆ ಕೆಡವಿದ್ದಾರೆ.

ವೀರಾಪುರ ಓಣಿಯ ಶಶಿಧರ ಹಾಗೂ ಗೀರಿಶ ಎಂಬಾತರೇ ಬೈಕ್ ಕಳ್ಳರಾಗಿದ್ದು, ಕೆಲವು ದಿನಗಳ ಹಿಂದೆ ಪಗಡಿ ಗಲ್ಲಿಯಲ್ಲಿ ಮುಸ್ತಾಫ್ ಮುಲ್ಲಾ ಎಂಬವರಿಗೆ ಸೇರಿದ ಬುಲೆಟ್ ಬೈಕ್ ಕಳ್ಳತನ ಮಾಡಿದ್ದರು. ಹಾಗೂ ಅದೇ ಬೈಕಿನಲ್ಲಿ ಶಿರಸಿ, ಮುಂಡಗೋಡ, ಸೇರಿದಂತೆ ಇನ್ನುಳಿದ ಪ್ರವಾಸಿ ಸ್ಥಳಗಳಿಗೆ ತೆರಳಿ ಮೋಜು ಮಸ್ತಿ ಮಾಡ್ತಿದ್ದರು.

ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದ ಹಾಗೆ ಬೆಂಡಿಗೇರಿ ಠಾಣೆಯ ಕ್ರೈಂ ಸಿಬ್ಬಂದಿಗಳಾದ ವೆಂಕಟೇಶ, ರಾಮಣ್ಣ, ಹನುಮಂತ, ಹಾಗೂ ಬಸು ಸೇರಿ, ಆರೋಪಿಗಳನ್ನು ಬುಲೆಟ್ ಸಮೇತ ಬಂಧನ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿನಯ ರೆಡ್ಡಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/08/2022 10:49 am

Cinque Terre

130.12 K

Cinque Terre

2

ಸಂಬಂಧಿತ ಸುದ್ದಿ