ಹುಬ್ಬಳ್ಳಿ : ಕಾಲೇಜ್ ವಿದ್ಯಾರ್ಥಿಯೊಬ್ಬ ಆನ್ ಲೈನ್ ಕ್ಯಾಸಿನೋ ಹಿಂದೆ ಬಿದ್ದು ಕೋಟಿ ಕೋಟಿ ಹಣ ಗಳಿಸಿ ರಾತ್ರೋ ರಾತ್ರಿ ಶ್ರೀಮಂತನಾಗಿಬಿಟ್ಟಿದ್ದ. ಸದ್ಯ ಅದೇ ಶ್ರೀಮಂತಿಕೆ ಆತನ ಪ್ರಾಣಕ್ಕೆ ಕುತ್ತು ತಂದಿದೆ.
ಹೌದು ಹೀಗೆ ಫೋಟೋದಲ್ಲಿ ಕಾಣುತ್ತಿರೋ ಈತನ ಹೆಸರು ಗರೀಬ್ ನವಾಜ್ ಹುಬ್ಬಳ್ಳಿಯ ನಿವಾಸಿ,ಗೋಕುಲ್ ರಸ್ತೆಯಲ್ಲಿನ ಕೆ ಎಲ್ ಇ ಇಂಜನೀಯರಿಂಗ್ ಕಾಲೇಜಿನಲ್ಲಿ ಮ್ಯಾಕ್ಯಾನಿಕಲ್ ಇಂಜನೀಯರಿಂಗ್ ವ್ಯಾಸಂಗ ಮಾಡುತ್ತಿದ್ದ,ಇದರ ನಡುವೆ ಈತನಿಗೆ ಆನ್ ಲೈನ್ ನಲ್ಲಿ ದುಡ್ಡು ಕಟ್ಟಿ ಆಡುವ ಕ್ಯಾಸಿನೋ ಗುಂಗು ಹೊಕ್ಕಿತ್ತು,ಎರಡು ಸಾವಿರ ರೂಪಾಯಿ ಯಿಂದ ಗೇಮ್ ಪ್ರಾರಂಭ ಮಾಡಿ ಬರೋಬ್ಬರಿ 11 ಕೋಟಿ ಗೆದ್ದು ಬಿಟ್ಟಿದ್ದನಂತೆ ಆದರೆ ಗೆದ್ದ ಹಣ ಕೈ ಸೇರಿಸಿಕೊಳ್ಳಲು ಅಕೌಂಟ್ ಬೇಕು ಅಲ್ವಾ ಅದಕ್ಕೆ ಅಂತ ಒಬ್ಬನ ಸೆಟ್ ಮಾಡಿಕೊಂಡು ತನ್ನ ಹಳ್ಳ ತಾನೇ ತೋಡಿಕೊಂಡಿದ್ದಾನೆ.
11 ಕೋಟಿಯಲ್ಲಿ ಅಬ್ದುಲ್ ಕರೀಮ್ ಎಂಬಾತನ ಬ್ಯಾಂಕ್ ಖಾತೆಗೆ 2 ಕೋಟಿ ವರ್ಗಾವಣೆ ಮಾಡಿ ಆತನಿಗೆ 30 ಲಕ್ಷ ಆತನಿಗೂ ಕೊಟ್ಟು ಉಳಿದ ಹಣ ಹಾಗೆ ಆನ್ ಲೈನ್ ಅಕೌಂಟ್ ನಲ್ಲಿ ಇಟ್ಟುಕೊಂಡಿದ್ದ
ಆದ್ರೆ ಅಬ್ದುಲ್ ಕರೀಮ್ ಜೂಜಾಟದಲ್ಲಿ ತೊಡಗಿ ಸಾಕಷ್ಟು ಹಣವನ್ನು ಕಳೆದುಕೊಂಡಿರುತ್ತಾನೆ ಇದರ ನಡುವೆ ಆತನಿಗೂ ಕೂಡಾ ಹಣದ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ ತಕ್ಷಣ ಆತನಿಗೆ ಆನ್ ಲೈನ್ ನಲ್ಲಿ 11 ಕೋಟಿ ಗೆದ್ದ ಗರೀಬ್ ನೆನಪಾಗಿ ಆತನ ಬಳಿಯಿಂದ ಹಣ ಕೀಳಲು ಆತನ ಕಿಡ್ನಾಪ್ ಮಾಡಲು ತನ್ನ ಆರು ಜನ ಸ್ನೇಹಿತ ಸಹಾಯ ಪಡೆದು ಕಳೆದ ಶನಿವಾರ ಗೋಕುಲ್ ರಸ್ತೆಯಲ್ಲಿ ಆತನನ್ನು ಟವೆರಾ ಕಾರಿನಲ್ಲಿ ಕಿಡ್ನಾಪ್ ಮಾಡುತ್ತಾನೆ.
ಅಷ್ಟೇ ಅಲ್ಲದೇ ಗರೀಬ್ ತಂದೆಗೆ ಕಾಲ್ ಮಾಡಿ ಒಂದು ಕೋಟಿ ತಂದು ಕೊಡದೇ ಹೋದಲ್ಲಿ ನಿನ್ನ ಮಗನನ್ನು ಕೊಲೆ ಮಾಡುವ ಬೆದರಿಕೆ ಹಾಕುತ್ತಾನೆ.ಕೂಡಲೇ ಗರೀಬ್ ತಂದೆ ಬೆಂಡಿಗೇರಿ ಪೊಲೀಸ ಠಾಣೆಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಬೆಂಡಿಗೇರಿ ಠಾಣೆಯ ಇನ್ಸ್ ಪೆಕ್ಟರ್ ಶ್ಯಾಮರಾವ್ ಸಜ್ಜನ ಕಮೀಷನರ್ ಲಾಬುರಾಮ್ ಅವರಿಗೆ ಮಾಹಿತಿ ನೀಡಿದ್ದಾರೆ. ಅಲರ್ಟ್ ಆದ ಕಮೀಷನರ್ ಲಾಬುರಾಮ್ ನಾಲ್ಕು ವಿಶೇಷ ತಂಡವನ್ನು ರಚನೆ ಮಾಡಿ ಕಿಡ್ನ್ಯಾಪ್ ಮಾಡಿದವರ ಪತ್ತೆಗೆ ಮುಂದಾದಾಗ ಕಿತ್ತೂರು ಬಳಿ ಇನ್ಸ್ ಪೆಕ್ಟರ್ ಕಾಲಿಮಿರ್ಚಿ ಬಲೆಗೆ ಕಿಡ್ನಾಪರ್ಸ್ ಕಾರು ಸಮೇತ ಸಿಕ್ಕಿ ಬಿದ್ದು ಜೈಲು ಸೇರಿದ್ದಾರೆ.
ಸದ್ಯ ಕಿಡ್ನಾಪ್ ಪ್ರಕರಣದಲ್ಲಿ ಮೊಹ್ಮದ ಆರೀಪ್,ಇಮ್ರಾನ್ ಮದಾರಲಿ,ಅಬ್ದುಲ್ ಕರೀಮ್, ಹುಸೇನಸಾಬ್,ಇಮ್ರಾನ್ ,ತೌಸೀಫ್ ಶಮಶುದ್ದೀನ್,ಹಾಗೂ ಮೊಹ್ಮದ ರಜಾಕ್ ಎನ್ನುವ ಏಳು ಜನ ಬಂಧನವಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/08/2022 09:28 pm