ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕುಸುಗಲ್ ಗ್ರಾಮದಲ್ಲಿ ಕಿರಾಣಿ ಅಂಗಡಿ ಕಳ್ಳತನ; ಸರಣಿಗಳ್ಳತನಕ್ಕೆ ಬ್ರೇಕ್ ಯಾವಾಗ?

ಹುಬ್ಬಳ್ಳಿ: ಕಿರಾಣಿ ಅಂಗಡಿಯೊಂದರ ಕಿಲಿ ಮುರಿದ ಕಳ್ಳರು, ಹಣ ಹಾಗೂ ಮೊಬೈಲ್ ಕದ್ದು ಪರಾರಿಯಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮ ಮಾರುತಿ ನಗರ ಬಳಿ ತಡರಾತ್ರಿ ನಡೆದಿದೆ.

ಹೌದು.. ಒಂದು ವರ್ಷದ ಹಿಂದೆ ಕಿರಾಣಿ ಅಂಗಡಿ ಹಾಕಿ ಉಪಜೀವನ ನಡೆಸುತ್ತಿದ್ದ ಶಾದೀಕ್ ಹುಬ್ಬಳ್ಳಿ ಎಂಬ ಯುವಕನ ಕಿರಾಣಿ ಅಂಗಡಿಯಲ್ಲಿ ಕಳ್ಳತನವಾಗಿದೆ. ಎಂದಿನಂತೆ ನಿನ್ನೆ ರಾತ್ರಿ ಶಾದೀಕ್ ಕಿರಾಣಿ ಅಂಗಡಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದಾನೆ. ಎಲ್ಲವನ್ನೂ ಗಮನಿಸಿದ ಕಳ್ಳರು ಕಬ್ಬಿಣದ ರಾಡ್ ನಿಂದ ಅಂಗಡಿ ಬೀಗ ಮುರಿದು, ಅಂಗಡಿಯಲ್ಲಿದ್ದ ಹದಿನೈದು ಸಾವಿರ ಹಣ ಹಾಗೂ ಎರಡು ಮೊಬೈಲ್, ಗುಟ್ಕಾ ಚೀಟ ಕದ್ದು ಎಸ್ಕೇಪ್ ಆಗಿದ್ದಾರೆ.

ನಿನ್ನೆ ರಾತ್ರಿ ನಾಲ್ಕೈದು ಯುವಕರ ತಂಡ, ಆಟೋ ತಂದು ನಿಲ್ಲಿಸಿದ್ದರು ಎನ್ನಲಾಗಿದೆ. ಅದೇ ರಸ್ತೆಯಲ್ಲಿ ಇನ್ನೂ ಎರಡು ಅಂಗಡಿ ಕಳ್ಳತನ ಮಾಡಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಕುಸುಗಲ್ ಗ್ರಾಮದಲ್ಲಿ ಈ ಹಿಂದೆಯೂ ಮನೆಗಳ್ಳತನ ಆಗಿರುವ ಪ್ರಕರಣಗಳಿವೆ. ಆದ್ದರಿಂದ ಪೊಲೀಸ್ ಇಲಾಖೆ ಎಚ್ಚೆತ್ತಕೊಂಡು ಕಳ್ಳರನ್ನು ಬಂಧನ ಮಾಡಿ ಗ್ರಾಮದಲ್ಲಿ ನಡೆಯುತ್ತಿರುವ ಸರಣಿಗಳ್ಳತನಕ್ಕೆ ಬ್ರೇಕ್ ಹಾಕಬೇಕಾಗಿದೆ.

Edited By :
Kshetra Samachara

Kshetra Samachara

06/08/2022 09:38 am

Cinque Terre

55.43 K

Cinque Terre

0

ಸಂಬಂಧಿತ ಸುದ್ದಿ