ಧಾರವಾಡ: ಧಾರವಾಡದ ಕೆಎಸ್‌ಐಎಸ್‌ಎಫ್ ಕಚೇರಿ ಆವರಣದಲ್ಲಿದ್ದ ಬೃಹತ್ ಮರವನ್ನು ಪೂರ್ವಾನುಮತಿ ಇಲ್ಲದೆ ಕಟಾವು ಮಾಡಿಸಿದ ಕೆಎಸ್‌ಐಎಸ್‌ಎಫ್ ಇನ್‌ಸ್ಪೆಕ್ಟರ್ ರಾಜಕುಮಾರ ಪತ್ತಾರ ಅವರಿಗೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅವರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಧಾರವಾಡದ ಕೆಎಸ್‌ಐಎಸ್‌ಎಫ್ ಕಚೇರಿಯ ಮುಂಭಾಗದಲ್ಲೇ ಈ ಬೃಹತ್ ಮರವಿತ್ತು. ಧ್ವಜಾರೋಹಣಕ್ಕೆ ಅಡ್ಡಿಯಾಗುತ್ತದೆ ಎಂದು ಇನ್‌ಸ್ಪೆಕ್ಟರ್ ಪತ್ತಾರ ಪೂರ್ವಾನುಮತಿ ಕೇಳದೆ ಅದನ್ನು ಕಟಾವು ಮಾಡಿಸಿದ್ದಾರೆ.
ಈ ಸಂಬಂಧ ಅವರಿಗೆ ನೋಟಿಸ್ ಜಾರಿ ಮಾಡಿರುವ ಎಸ್ಪಿ, ಈ ಮರಗಳು ಪೊಲೀಸ್ ಅಧೀಕ್ಷಕರ ಅಧೀನದ ಆಸ್ತಿಯಾಗಿದ್ದು, ಅವುಗಳನ್ನು ಪೂರ್ವಾನುಮತಿ ಇಲ್ಲದೆ ಹಾಗೂ ಯಾವುದೇ ಮಾಹಿತಿ ನೀಡದೆ ಕಟಾವು ಮಾಡಿಸಲಾಗಿದ್ದು, ಈ ಬಗ್ಗೆ ಇನ್‌ಸ್ಪೆಕ್ಟರ್ ಅವರ ಮೇಲಾಧಿಕಾರಿಗಳು ಕೂಡ ಮಾಹಿತಿ ನೀಡಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
Kshetra Samachara
02/08/2022 10:43 pm