ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವತಿಯರ ರಕ್ಷಣೆ- ಸಾಂತ್ವನ ಕೇಂದ್ರಕ್ಕೆ ರವಾನೆ

ಹುಬ್ಬಳ್ಳಿ: ನವನಗರದಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ಬುಧವಾರ ದಾಳಿ ಮಾಡಿ ನಾಲ್ವರು ಯುವತಿಯರನ್ನು ರಕ್ಷಣೆ ಮಾಡಿ ಇಬ್ಬರು ಪಿಂಪ್‌ಗಳನ್ನು ಜೈಲಿಗೆ ತಳ್ಳಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಯುವತಿಯರನ್ನು ಗುರುವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಅವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲಾಗಿದೆ.

ನಾಲ್ಕು ಜನ ಯುವತಿಯರ ಪೈಕಿ ಇಬ್ಬರು ಧಾರವಾಡ ಜಿಲ್ಲೆಯವರಾಗಿದ್ದು, ಇನ್ನಿಬ್ಬರು ಹಾಸನ ಮೂಲದವರಾಗಿದ್ದಾರೆ. ಇವರಿಗೆ ಗಿರಾಕಿಗಳನ್ನು ಹುಡುಕಿ ತಂದು ಕೊಡುತ್ತಿದ್ದ ಇಬ್ಬರು ಪಿಂಪ್‌ಗಳು ಹುಬ್ಬಳ್ಳಿಯವರು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

Edited By : Nagesh Gaonkar
Kshetra Samachara

Kshetra Samachara

28/07/2022 11:08 pm

Cinque Terre

47.46 K

Cinque Terre

1

ಸಂಬಂಧಿತ ಸುದ್ದಿ