ಹುಬ್ಬಳ್ಳಿ: ಹುಬ್ಬಳ್ಳಿಯ ತಾರಿಹಾಳ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ ಬಗೆದಷ್ಟು ಬಯಲಾಗುತ್ತಿವೆ. ಈಗಾಗಲೇ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದ ಕಾರ್ಖಾನೆಯ ಬಗ್ಗೆ ಪೊಲೀಸ್ ಇಲಾಖೆ ಮತ್ತಷ್ಟು ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದು, ಮ್ಯಾನೇಜರ್ ಮಂಜುನಾಥ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಹೌದು. ಮಾಲೀಕ ಸೇರಿ ಮೂವರು ಪಾರ್ಟನರ್ ಗಳು ನಾಪತ್ತೆಯಾಗಿದ್ದು, ಸ್ಪಾರ್ಕಲ್ ಕಾರ್ಖಾನೆಗೆ ಕಚ್ಚಾ ಸಾಮಗ್ರಿ ಪೂರೈಸಿದವರ ವಿಚಾರಣೆಯನ್ನು ಕೂಡ ಕಲೆ ಹಾಕುತ್ತಿದ್ದಾರೆ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಸ್ಪಾರ್ಕಲ್ ಕ್ಯಾಂಡಲ್ ತಯಾರಿಕಾ ಘಟಕದಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಮೂವರು ಮೃತಪಟ್ಟು, 5 ಜನ ಗಾಯಗೊಂಡಿದ್ದರು. ಘಟನೆ ನಡೆದು ನಾಲ್ಕು ದಿನಗಳಾದರೂ ಫ್ಯಾಕ್ಟರಿ ಮಾಲೀಕ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ಪೊಲೀಸರು ಮ್ಯಾನೇಜರ್ ಮಂಜು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಲ್ಲಿ ಯಾವುದೇ ರೀತಿಯ ಅವ್ಯವಸ್ಥೆ ಹಾಗೂ ಅವೈಜ್ಞಾನಿಕತೆ ಇಲ್ಲ ಅಂತ ಹೇಳಿದ್ದ ಮ್ಯಾನೇಜರ್ ಈಗ ಪೊಲೀಸ್ ವಶದಲ್ಲಿದ್ದಾನೆ.
ಇನ್ನೂ ಘಟನೆ ನಡೆದು ಕೆಲ ಹೊತ್ತಿಗೆ ಮಾಲೀಕನ ನಂಬರ್ ಪತ್ತೆ ಮಾಡಿ ಕರೆ ಮಾಡಿದ್ದ ಪೊಲೀಸರು
ಕಾರ್ಖಾನೆ ಮಾಲೀಕ ಅಬ್ದುಲ್ ಶೇಕ್ ಘಟನೆ ಬಳಿಕ, ತಾನು ಮುಂಬೈನಲ್ಲಿದ್ದು, ನಾಳೆ ಬರುವುದಾಗಿ ತಿಳಿಸಿದ್ದ. ಆದರೆ ಇದುವರೆಗೂ ಪೊಲೀಸರ ಕೈಗೆ ಸಿಕ್ಕಿಲ್ಲ. ಕಾರ್ಖಾನೆಯ ಪಾರ್ಟನರ್ ಗಳಾದ ತಬಸುಮ್ ಹಾಗೂ ಆರೀಫ್ ಸಹ ನಾಪತ್ತೆಯಾಗಿದ್ದಾರೆ. ಅಬ್ದುಲ್ ಶೇಕ್ ಮುಂಬೈ ಮೂಲದ ಏಜೆನ್ಸಿ ತೆಗೆದುಕೊಂಡು ಈ ಘಟಕ ಇಲ್ಲಿ ಶುರು ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಇಲ್ಲಿ ಸ್ಪೋಟಕ ವಸ್ತುಗಳ ತಯಾರಿಕೆ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಮ್ಯಾನೇಜರ್ ಮಾತ್ರ ಈ ಮಾತನ್ನು ತಳ್ಳಿ ಹಾಕಿದ್ದರು.
ಒಟ್ಟಿನಲ್ಲಿ ಸಿಗದ ಮಾಲೀಕರಿಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಗಡ್ಡಕ್ಕೆ ಬೆಂಕಿ ಹತ್ತಿದ ಮೇಲೆ ಗುಡ್ಡ ತೋಡುವ ರೀತಿಯಲ್ಲಿ ಇಂತಹ ದೊಡ್ಡ ಅವಘಡ ಸಂಭವಿಸಿದ ಮೇಲೆ ಎಚ್ಚೆತ್ತುಕೊಂಡಿದ್ದಾರೆ. ಅದು ಏನೇ ಇರಲಿ ಈ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಇದರ ಜಾಲವನ್ನು ಭೇದಿಸುವ ಕಾರ್ಯವನ್ನು ಮಾಡಬೇಕಿದೆ.
Kshetra Samachara
26/07/2022 06:02 pm