ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರಗೆ ಜಾಮೀನು ಮಂಜೂರು

ಹುಬ್ಬಳ್ಳಿ: ನವವಿವಾಹಿತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಚೇತನ್‌ ಹಿರೇಕೆರೂರಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ತನ್ನ ಪತ್ನಿ ಸಹನಾಳನ್ನು ಆಕೆಯ ತಂದೆ ಶಿವು ಹಿರೇಕೆರೂರ, ತಾಯಿ ಜಯಲಕ್ಷ್ಮೇ ಹಾಗೂ ಅವಳ ಸಹೋದರ ಸಂಬಂಧಿ ಆಗಿರುವ ಪಾಲಿಕೆ ಸದಸ್ಯ ಚೇತನ್‌ ಅಪಹರಿಸಿದ್ದಾರೆ ಎಂದು ನಿಖಿಲ್ ದಾಂಡೇಲಿ ಗೋಕುಲ ಪೊಲೀಸ್‌ ಠಾಣೆಯಲ್ಲಿ ಜೂ. 24ರಂದು ಪ್ರಕರಣ ದಾಖಲಿಸಿದ್ದರು. ಪೊಲೀಸರು ಸಹನಾ ಅವರನ್ನು ಗೋವಾದಲ್ಲಿ ಪತ್ತೆ ಮಾಡಿ ಹುಬ್ಬಳ್ಳಿಗೆ ಕರೆತಂದಿದ್ದರು. ಕೆಲ ದಿನಗಳ ಹಿಂದೆ ಗೋಕುಲ್ ರೋಡ್ ಪೊಲೀಸರು ಚೇತನ್ ಹಿರೇಕೆರೂರು ಹಾಗೂ ಇತರರನ್ನು ಬಂಧಿಸಿದ್ದರು. ಇದೀಗ ನ್ಯಾಯಾಲಯವು ಕೆಲ ಷರತ್ತುಗಳ ಅನ್ವಯ ಜಾಮೀನು ನೀಡಿದೆ.

Edited By : Vijay Kumar
Kshetra Samachara

Kshetra Samachara

07/07/2022 11:54 am

Cinque Terre

38.7 K

Cinque Terre

7

ಸಂಬಂಧಿತ ಸುದ್ದಿ