ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗುರೂಜಿ ಅಚ್ಚುಮೆಚ್ಚಿನ ಹೋಟೆಲ್‌ನಲ್ಲಿಯೇ ಹತ್ಯೆ.!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಉಣಕಲ್ ಕೆರೆಯ ದಡದಲ್ಲಿರುವ ಪ್ರೆಸಿಡೆಂಟ್ ಹೋಟಲ್ ಗುರೂಜಿಯ ಅಚ್ಚು ಮೆಚ್ಚಿನ ಹೋಟಲ್ ಆಗಿದ್ದು, ಅಚ್ಚುಮೆಚ್ಚಿನ ಹೊಟೇಲ್ ನಲ್ಲಿಯೇ ಗುರೂಜಿಯವರ ಹತ್ಯೆಯಾಗಿದ್ದು, ಚಂದ್ರಶೇಖರ ಗುರೂಜಿ ಕುರಿತಾದ ಮತ್ತೊಂದು ಮಾಹಿತಿ ಲಭ್ಯವಾಗಿದೆ.

ಚಂದ್ರಶೇಖರ ಗುರೂಜಿ ಹುಬ್ಬಳ್ಳಿಗೆ ಬಂದಾಗಲೆಲ್ಲ ಇದೇ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಕಳೆದ ತಿಂಗಳೂ ಎರಡೂ ದಿನ ಹೋಟೆಲ್‌ನಲ್ಲಿ ತಂಗಿದ್ದ ಗುರೂಜಿ ನಿನ್ನೆ ಇದೇ ಹೋಟೆಲ್‌ನಲ್ಲಿ ಹಂತಕರಿಬ್ಬರಿಂದ ಕೊಲೆಯಾಗಿದ್ದಾರೆ.

ಹಂತಕರು ಹೋಟೆಲ್ ಎಂಟ್ರಿ ಕೊಟ್ಟ ಹತ್ತು ನಿಮಿಷದಲ್ಲಿ ಗುರೂಜಿ ಹತ್ಯೆ ನಡೆದಿತ್ತು. 12:13ಕ್ಕೆ ಮಹಾಂತೇಶ, ಮಂಜುನಾಥ ಹೋಟೆಲ್ ಪ್ರವೇಶ ಮಾಡಿದ್ದರು. ಸರಿಯಾಗಿ 12:23ಕ್ಕೆ ಗುರೂಜಿ ಹತ್ಯೆ ಮಾಡಿ ಏಸ್ಕೇಪ್ ಆಗಿದ್ದರು. ಹೋಟೆಲ್ ಸಿಬ್ಬಂದಿ ಆ ಕಡೆ ಈ ಕಡೆ ನೋಡವಷ್ಟರಲ್ಲೇ ಹತ್ಯೆ ಮಾಡಿ ಏಸ್ಕೇಪ್ ಆಗಿದ್ದರು ಎಂಬ ಮಾಹಿತಿ ಎಲ್ಲರನ್ನೂ ದಿಗ್ಬ್ರಾಂತಗೊಳಿಸಿದೆ.

Edited By : Somashekar
Kshetra Samachara

Kshetra Samachara

06/07/2022 01:42 pm

Cinque Terre

57.83 K

Cinque Terre

0

ಸಂಬಂಧಿತ ಸುದ್ದಿ