ಹುಬ್ಬಳ್ಳಿ: ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಹತ್ಯೆಯಾಗುವ ಹಿಂದೆಯಷ್ಟೆ ಚಂದ್ರಶೇಖರ ಗುರೂಜಿ ಹುಬ್ಬಳ್ಳಿಗೆ ಬಿಎಮ್ಡಬ್ಲ್ಯೂ ಕಾರಿನಲ್ಲಿ ಬಂದಿದ್ದರು ಎನ್ನಲಾಗುತ್ತಿದೆ.
ಹೌದು.. ಬಿಎಂಡಬ್ಲೂ ಕಾರ್ ಮಹಾರಾಷ್ಟ್ರದಲ್ಲಿ ವಾಹನ ನೋಂದಣಿ ಆಗಿತ್ತು. ಆದರೇ ಕಾರು ಇನ್ಸ್ಯೂರನ್ಸ್ ತುಂಬಲು ಗುರೂಜಿ ಬಳಿ ಹಣ ಇರಲಿಲ್ಲ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಲಭ್ಯವಾಗಿದೆ.
ಕಳೆದ ತಿಂಗಳೆ ಕಾರಿನ ವಿಮೆ ಮುಗಿದಿತ್ತು. ಆದ್ರೂ ಕಾರ್ ವಿಮೆ ತುಂಬಿರಲಿಲ್ಲ ಚಂದ್ರಶೇಖರ ಗುರೂಜಿ. ಅಲ್ಲದೇ ಈಗೀಗ ಬಹಳಷ್ಟು ಆರ್ಥಿಕ ಸಂಕಷ್ಟದಲ್ಲಿ ಗುರೂಜಿ ಸಿಲುಕಿದ್ದರು ಎನ್ನಲಾಗುತ್ತಿದೆ. ನೋಟ್ ಬ್ಯಾನ್ ನಂತರ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು, ಇದರಿಂದಲೇ ಬೇನಾಮಿ ಆಸ್ತಿಗಳನ್ನು ಗುರೂಜಿ ವಾಪಸ್ ಕೇಳುತ್ತಿದ್ದರು. ಈ ನಿಟ್ಟಿನಲ್ಲಿ ಕೊಲೆ ನಡೆದಿದೆಯಾ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/07/2022 11:29 am