ಹುಬ್ಬಳ್ಳಿ ಬ್ರೇಕಿಂಗ್ Exclusive
ಹುಬ್ಬಳ್ಳಿ : ಹೌದು ರಾತ್ರೋ ರಾತ್ರಿ ನಡೆಯುತ್ತಿದ್ದ ಗ್ಯಾಂಗ್ ವಾರ್ ನ್ನ ಅವಳಿನಗರ ಪೊಲೀಸರು ತಡೆಗಟ್ಟಿ ನೆಮ್ಮದಿಯ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ರಾತ್ರಿ 1 ಗಂಟೆ ವರೆಗೂ ಮೈಯಲ್ಲಾ ಕಣ್ಣಾಗಿ ಕಾಯ್ದು ಎರಡು ಏರಿಯಗಳ ಮಧ್ಯೆ ನಡೆಯಲಿದ್ದ ಜಗಳಕ್ಕೆ ಪುಲ್ ಸ್ಟಾಪ್ ಇಟ್ಟಿದ್ದಾರೆ.
ಎಸ್ ಅವಳಿನಗರ ಪೊಲೀಸರ ಸಮಯ ಪ್ರಜ್ಞೆ ಯಿಂದ ಭಾರಿ ಅನಾಹುತ ತಪ್ಪಿತು ಎನ್ನಬಹುದು , ನಿನ್ನೆ ದಿನ ಶಾಸಕರ ಹುಟ್ಟಿದ ದಿನದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರದ ವಿಚಾರವಾಗಿ ಟೌನ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನೇಕಾರನಗರದ ಹಾಗೂ ಸೆಟ್ಲಮೆಂಟ್ ಯುವಕರ ಮಧ್ಯೆ ಕಿರಿಕ್ ಶುರುವಾಗಿತ್ತು, ಈ ವೇಳೆ ಎರಡು ಗ್ಯಾಂಗ್ ಗಳು ರಾತ್ರೀ ಕಾದಾಟಕ್ಕೆ ತಯಾರಿ ನಡೆಸಿ ಸನ್ನದ್ಧವಾಗಿವೆ ಎಂದೂ ಕಮಿಷನರ್ ಲಾಬುರಾಮ್ ಗೆ ಮಾಹಿತಿ ತಿಳಿದಿತ್ತು. ಕೂಡಲೇ ಅಲರ್ಟ್ ಆದ ಕಮಿಷನರ್ ಎರಡೂ ಕಡೆ ಏಕ ಕಾಲಕ್ಕೆ ದಾಳಿ ನಡೆಸಲು ಸೂಚನೆ ನೀಡುತ್ತಾರೆ
ಕಸಬಾಪೆಟ್ ಇನ್ಸ್ಪೆಕ್ಟರ್ A.M ಬನ್ನಿ ಹಾಗೂ ಬೆಂಡಿಗೇರಿ ಇನ್ಸ್ಪೆಕ್ಟರ್ ಸಜ್ಜನ್ ಕಮಿಷನರ್ ಸೂಚನೆ ಪಡೆದು ಮುಂಜಾಗ್ರತಾ ಕ್ರಮವಾಗಿ ಕೆಲವು ಯುವಕರನ್ನ ಪೋಲಿಸ್ ಠಾಣೆಗೆ ಕರೆ ತಂದಿದ್ದಾರೆ
ಪೋಲೀಸರ ನಡೆಯಿಂದ ಶಾಕ್ ಅಗಿದ್ದ ಸಾರ್ವಜನಿಕರು ತಮ್ಮ ಯುವಕರನ್ನ ಬಿಡುವಂತೆ ಠಾಣೆಗೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಸಂದರ್ಭವೂ ಜರುಗಿತು ನಂತರ ಡಿಸಿಪಿ ಸಾಹಿಲ್ ಬಾಗ್ಲ ರಾತ್ರಿ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು
ಸಧ್ಯ ಆ ಭಾಗದ ಶಾಸಕ ಸಂಧಾನದ ಫಲವಾಗಿ ಇನ್ನೂ ಮುಂದೆ ಎರಡೂ ಗುಂಪುಗಳ ಮದ್ಯೆ ಮನಸ್ತಾಪ ಅಂತ್ಯಗೊಂಡು ವಾತಾವರಣ ತಿಳಿಯಾಯಿತು ಎಂದು ತಿಳಿದು ಬಂದಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/07/2022 10:40 am