ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಪೊಲೀಸ್ ರಕ್ಷಣೆ ಇಲ್ಲದ ಬಸ್ ನಿಲ್ದಾಣ ಜಗಳ, ಕಳ್ಳತನ ಖಾಯಂ!

ಕುಂದಗೋಳ: ಅದೊಂದು ನಿತ್ಯ ಸಾವಿರಾರು ಜನ ಪ್ರಯಾಣಿಸುವ ಬಸ್ ನಿಲ್ದಾಣ, ಆದ್ರೆ ಅಲ್ಲೀಗ ಹಗಲು ಕಳ್ಳರ ಹಾವಳಿ, ವಿದ್ಯಾರ್ಥಿ, ಕಂಡಕ್ಟರ್, ಡ್ರೈವರ್‌ಗಳ ಜಗಳ, ಬಸ್ ಏರಲು ನೂಕುನುಗ್ಗಲು ಇಲ್ಲಿ ಸಹಜ.

ಕುಂದಗೋಳ ತಾಲೂಕ ಬಸ್ ನಿಲ್ದಾಣದಲ್ಲಿ ನಿತ್ಯ ಬಸ್ ಪ್ರಯಾಣದ ವೇಳೆ ಒಂದಿಲ್ಲೊಂದು ಜಗಳ, ನೂಕುನುಗ್ಗಲು ಸಹಜವಾಗಿವೆ. ಮೊನ್ನೆ ವಿದ್ಯಾರ್ಥಿ ಹಾಗೂ ಸಾರಿಗೆ ಬಸ್ ಚಾಲಕರು ಬಸ್ ಏರುವ ವಿಚಾರಕ್ಕೆ ಕೈ,ಕೈ ಮೀಲಾಯಿಸಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ರೇ, ಇತ್ತಿಚೆಗೆ ಇದೇ ಬಸ್ ನಿಲ್ದಾಣದಲ್ಲಿ ವೃದ್ಧರೊಬ್ಬರ ಜೇಬಿಗೆ ಕಳ್ಳ ಹಗಲಲ್ಲೇ ಕತ್ತರಿ ಹಾಕಿದ್ದಾನೆ.

ಪರಿಸ್ಥಿತಿ ಹೀಗಿದ್ದರೂ ಸಹ ಈ ತಾಲೂಕು ಬಸ್ ನಿಲ್ದಾಣದಲ್ಲಿ ನಡೆಯುವ ಅಹಿತಕರ ಘಟನೆ ತಡೆಯಲು ಇಲ್ಲೊಂದು ಪೊಲೀಸ್ ಸಿಬ್ಬಂದಿ ನಿಯೋಜನೆ ಇಲ್ಲಾ, ಇನ್ನೂ ಸಿಸಿ ಕ್ಯಾಮರಾ ಅಂತೂ ಮೊದಲೇ ಇಲ್ಲಾ.

ನಿತ್ಯ ಬೆಳಂ ಬೆಳಿಗ್ಗೆಯಿಂದ ರಾತ್ರಿ 10 ಗಂಟೆಗೂ ಅಧಿಕ ಸಮಯ ಬಸ್ ಓಡಾಟ ನಡೆಸುವ ಎಲ್ಲಾ ವರ್ಗದ ಪ್ರಯಾಣಿಕರು ಸೇರಿದಂತೆ ಮಹಿಳಾ ಪ್ರಯಾಣಿಕರಿಗೆ ರಕ್ಷಣೆ ಇಲ್ಲದ ಸ್ಥಿತಿಗೆ ಕುಂದಗೋಳ ಬಸ್ ನಿಲ್ದಾಣದ ತಲುಪಿದೆ. ನಿತ್ಯ ಪ್ರಯಾಣ ಬೆಳೆಸುವ ಕಾಲೇಜು ವಿದ್ಯಾರ್ಥಿನಿಯರಿಗೂ ರಕ್ಷಣೆ ಅವಶ್ಯಕತೆ ಇದೆ‌.

ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಸ್ಥಳೀಯ ಕುಂದಗೋಳ ಗ್ರಾಮೀಣ ಪೊಲೀಸರು ಗಮನಿಸಿ ಅಹಿತಕರ ಘಟನೆ ನಡೆದಾಗ ಬಂದು ಹೋಗುವ ಪೊಲೀಸ್ ಬದಲಾಗಿ, ಬಸ್ ನಿಲ್ದಾಣಕ್ಕಂದೆ ನಿತ್ಯ ಒಬ್ಬ ಪೊಲೀಸರನ್ನು ಖಾಯಂ ನಿಯೋಜನೆ ಮಾಡಿರಿ ಎಂಬುದು ಜನಾಭಿಪ್ರಾಯ.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Nagesh Gaonkar
Kshetra Samachara

Kshetra Samachara

02/07/2022 03:27 pm

Cinque Terre

61.3 K

Cinque Terre

2

ಸಂಬಂಧಿತ ಸುದ್ದಿ