ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ವಾಣಿಜ್ಯ ನಗರಿ ಎಂದೇ ಖ್ಯಾತಿಯಾದ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಕ್ರೈಂಗಳ ಹಾವಳಿ ಹೆಚ್ಚಾಗುತ್ತಿದೆ. ಈ ದಿಸೆಯಲ್ಲಿ ಹು-ಧಾ ಪೊಲೀಸ್ ಆಯುಕ್ತರು ಅಪರಾಧದಲ್ಲಿ ತೊಡಗುವ ಪುಂಡ-ಪೋಕಿರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ ಗಂಡು ಮೆಟ್ಟಿದ ನಾಡು, ವಾಣಿಜ್ಯ ಚಟುವಟಿಕೆಗಳ ನೆಲೆಬೀಡಾಗಿದ್ದು, ಹುಬ್ಬಳ್ಳಿ ಅತಿ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ಪ್ರದೇಶವೂ ಆಗಿದೆ. ಬದುಕು ಕಟ್ಟಿಕೊಳ್ಳಲು ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳ ಜನರು ಬಂದು ನೆಲೆಯೂರಲು ಪ್ರಾರಂಭಿಸಿದ್ದಾರೆ. ಎಲ್ಲರೂ ಹೊಟ್ಟೆ ಪಾಡಿಗಾಗಿ ಒಂದೊಂದು ಉದ್ಯಮ, ವ್ಯಾಪಾರ, ದುಡಿಮೆಯಲ್ಲಿ ತೊಡಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಬೆದರಿಕೆ, ವೈಯಕ್ತಿಕ ದ್ವೇಷ, ಪ್ರೀತಿ ಪ್ರೇಮ, ಹಣ ಸೇರಿದಂತೆ ಇನ್ನಿತರ ಕ್ಷುಲ್ಲಕ ಕಾರಣಕ್ಕೆ ಅಪರಾಧಗಳು ನಡೆಯುತ್ತಿವೆ. ಪರಿಣಾಮ ಸ್ಥಳೀಯರಲ್ಲಿ ಆತಂಕ ಮನೆಮಾಡುತ್ತಿದೆ. ಇದಲ್ಲದೇ ವಾಣಿಜ್ಯ ನಗರ ಹೋಗಿ ಅಪರಾಧ ನಗರವಾಗುತ್ತಿದೆಯೇ ಎಂಬ ಅನುಮಾನವೂ ಸದ್ಯ ನಗರದ ಜನರನ್ನು ಕಾಣುತ್ತಿದೆ.
ಜನರಲ್ಲಿ ಉಂಟಾಗಿರುವ ಈ ಆತಂಕ ದೂರ ಮಾಡಲು ಹು-ಧಾ ಪೊಲೀಸ್ ಕಮಿಷನರೇಟ್ ಮುಂದಾಗಿದೆ. ಅಪರಾಧಿಗಳಿಗೆ ಪೊಲೀಸ್ ಆಯುಕ್ತ ಲಾಬೂರಾಮ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಪರಾಧಕ್ಕೆ ಕುಮ್ಮಕ್ಕು ನೀಡುವವರು ಹಾಗೂ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ವಾಣಿಜ್ಯ ನಗರಿಯಲ್ಲಿ ಅಪರಾಧಗಳ ಹಾವಳಿ ಹೆಚ್ಚಾಗಿದ್ದು, ಪೊಲೀಸ್ ಕಮೀಷನರೇಟ್ ಅಪರಾಧದಲ್ಲಿ ತೊಡಗಿದ್ದವರನ್ನು ಸೆರೆ ಹಿಡಿದು ಶಿಕ್ಷೆಗೆ ಒಳಪಡಿಸಿದ್ದಾರೆ. ಅಷ್ಟಕ್ಕೂ ಮೀರಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಜೈಲುವಾಸ ಗ್ಯಾರಂಟಿ
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
Kshetra Samachara
28/06/2022 02:26 pm