ಹುಬ್ಬಳ್ಳಿ: ಅದು ಇತ್ತೀಚೆಗೆ ಮದುವೆಯಾಗಿದ್ದ ನವಜೋಡಿ. ಮದುವೆ ಆಗಿ ಸಾಂಪ್ರದಾಯಿಕವಾಗಿ ಗಂಡನ ಮನೆಗೆ ಹೋಗಬೇಕಿದ್ದ ಮದುಮಗಳು ಈಗ ಕೋರ್ಟ್ ಹಾಗೂ ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದಾಳೆ. ಸಹೋದರ ಸಂಬಂಧಿಯ ವಿರುದ್ಧವೇ ಆಕ್ರೋಶಗೊಂಡಿದ್ದು, ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾರೆ.
ಮೊನ್ನೆಯಷ್ಟೇ ನವವಿವಾಹಿತೆಯೊಬ್ಬಳ ಅಪಹರಣದ ಪ್ರಕರಣ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಪಹರಣವಾಗಿದ್ದ ಯುವತಿ ಸಹನಾ ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷವಾಗಿದ್ದಾಳೆ. ಆದರೆ ಆ ಯುವತಿ ಮಾತ್ರ ನನಗೆ ನ್ಯಾಯ ಬೇಕು. ನಾನು ಪ್ರೀತಿಸಿ ಮದುವೆಯಾಗಿದ್ದೇನೆ. ಆದರೆ ಕಾರ್ಪೊರೇಟರ್ ಚೇತನ ಹಿರೇಕೇರೂರ ಮಾಡಿದ ಕಾರ್ಯದಿಂದ ಈಗ ನಾನು ಪೊಲೀಸ್ ಹಾಗೂ ಕೋರ್ಟ್‌ನಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಕಾರ್ಪೋರೇಟರ್ ವಿರುದ್ಧ ದೂರು ದಾಖಲಾದ್ರೂ ಕೈಗೊಂಡಿಲ್ಲ ಕ್ರಮ. ಪ್ರಕರಣ ದಾಖಲಾಗಿ ನಾಲ್ಕು ದಿನಗಳು ಕಳೆದರೂ ಯಾವುದೇ ರೀತಿಯಲ್ಲಿ ನಮಗೆ ನ್ಯಾಯ ಸಿಕ್ಕಲ್ಲ ಎಂದು ಯುವತಿ ಸಹನಾ ಗಂಭೀರವಾಗಿ ಆರೋಪ ಮಾಡಿದ್ದಾರೆ. ಅಲ್ಲದೇ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.
ಇನ್ನೂ ಆರತಕ್ಷತೆಗೆ ಸಿದ್ದತೆಯಲ್ಲಿದ್ದ ಸೋದರಿ ಸಂಬಂಧಿ ಯುವತಿಯನ್ನ ಅಪಹರಿಸಿದ ಆರೋಪದ ಮೇಲೆ ಕಾರ್ಪೋರೆಟರ್ ಚೇತನ ಹೀರೋಕೆರೂರು ಸೇರಿ ಮೂರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ಲದೇ ಮನೆಯವರ ವಿರೋಧ ಲೆಕ್ಕಿಸದೇ ಏಳು ತಿಂಗಳ ಹಿಂದೆ ಮದುವೆಯಾಗಿದ್ದ ಸಹನಾ, ನಿಖಿಲ್ ದಾಂಡೇಲಿ ಎಂಬ ಯುವಕನನ್ನು ಮದುವೆಯಾಗಿದ್ದರು. ಆದರೆ ಮನೆಯವರನ್ನು ಬಿಟ್ಟು ಮದುವೆಯಾಗಿದ್ದ ಅವರು, ಹೆತ್ತವರ ಆಶೀರ್ವಾದ ಪಡೆದು ಕಳೆದ 26 ರಂದು ಆರತಕ್ಷತೆ ಕಾರ್ಯಕ್ರಮಕ್ಕೆ ಪೋಷಕರನ್ನು ಭೇಟಿಯಾಗಿ ಆರ್ಶೀವಾದ ಪಡೆಯಲು ಹೋಗಿದ್ದ ಯುವತಿಯನ್ನು ಅಪಹರಣ ಮಾಡಲಾಗಿದೆ ಎಂದು ನಿಖಿಲ್ ದಾಂಡೇಲಿ ಗೋಕುಲ ರೋಡ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಚೇತನ ಹೀರೇಕೆರೂರ ಹುಬ್ಬಳ್ಳಿಯಲ್ಲಿಯೇ ಇದ್ದರು ವಶಕ್ಕೆ ಪಡೆಯದ ಪೊಲೀಸರು ನಡೆಯ ವಿರುದ್ಧ ನಿಖಿಲ್ ದಾಂಡೇಲಿ ಆಕ್ರೋಶ ವ್ಯಕ್ತಪಡಿಸಿದ್ದು, ಇದರಿಂದ ಕೋರ್ಟ್ ಮೊರೆ ಹೋದ ದಂಪತಿಗಳು, ನಮಗೆ ನ್ಯಾಯ ಕೊಡಿಸಿ, ಅಪಹರಣದ ಆರೋಪಿ ಚೇತನ ಹೀರೇಕೆರೂರನನ್ನು ಬಂಧಿಸಿ ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ದಂಪತಿಗಳ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಏರಿದ್ದು, ಆರತಕ್ಷತೆಯ ಸಂಭ್ರಮದಲ್ಲಿದ್ದವರು ಈ ಕೋರ್ಟ್ ಕಚೇರಿ ಅಲೆಯುವಂತಾಗಿದೆ. ಈ ಬಗ್ಗೆ ಕಾನೂನು ರೀತಿಯಲ್ಲಿ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಬೇಕಿದೆ.
Kshetra Samachara
28/06/2022 11:40 am