ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ವಾಣಿಜ್ಯ ನಗರಿ ದಿನೇ ದಿನೇ ಬೆಳೆಯುತ್ತಿದೆ. ಅದೇ ರೀತಿ ಕ್ರೈಂ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಒಂದು ತಿಂಗಳಲ್ಲಿ ನೂರಾರು ಸೈಬರ್ ಕ್ರೈಂ ಆಗುತ್ತಿವೆ. ಇದಕ್ಕೆ ಕಡಿವಾಣ ಇಲ್ಲವೇ.? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸರಣಿ ಮನೆ ಕಳ್ಳತನ, ಆನ್‌ಲೈನ್‌ನಲ್ಲಿ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡುತ್ತಿದ್ದಾರೆ ವಂಚಕರು. ಆನ್‌ಲೈನ್‌ನಲ್ಲಿ ವಂಚನೆ ಮಾಡಿದವರು ಇನ್ನೂವರೆಗೂ ಯಾರು ಕೂಡ ಸಿಕ್ಕಿಲ್ಲ. ಅದೆಲ್ಲೋ ಕುಳಿತುಕೊಂಡು ಬ್ಯಾಂಕ್ ಸಿಬ್ಬಂದಿ ಎಂದು ಹೇಳಿ ಖಾತೆಗೆ ಸಂಬಂಧಿಸಿದ ಎಲ್ಲ ಡಿಟೈಲ್ಸ್ ಪಡೆದುಕೊಂಡು ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದಕ್ಕೆ ಅದೆಷ್ಟೋ ಜನರು ಬಲಿಯಾಗಿದ್ದಾರೆ. ಸದ್ಯ ನಗರದಲ್ಲಿ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿರುವುದರಿಂದ ಪೊಲೀಸ್ ಕಮಿಷನರೇಟ್ ಕ್ರೈಂ ಅನ್ನು ತಡೆಯಲು ಜಾಗೃತಿ ಮೂಡಿಸುವುದಷ್ಟೆ ಅಲ್ಲದೆ ವಂಚಕರನ್ನು ಸೆರೆ ಹಿಡಿಯುತ್ತಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವಾಣಿಜ್ಯ ನಗರಿಯಲ್ಲಿ ನಡೆಯುತ್ತಿರುವ ಕ್ರೈಂಗಳನ್ನು ಆದಷ್ಟು ಹೆಚ್ಚಾಗಿ ತಡೆಯಬೇಕು. ಅಲ್ಪಸ್ವಲ್ಪ ಹಣ ಇಟ್ಟುಕೊಂಡವರು ಹಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಪೊಲೀಸ್ ಆಯುಕ್ತರು ಆದಷ್ಟು ಬೇಗ ಕಡಿವಾಣ ಹಾಕಬೇಕು.
Kshetra Samachara
20/06/2022 01:07 pm