ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹಾಡಹಗಲೇ ಮಗು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಬಗ್ಗೆ ಮಗುವಿನ ಪಾಲಕರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ಹೌದು. ಖದೀಮರು 40 ದಿನದ ಹಸುಗೂಸು ಕಳ್ಳತನ ಮಾಡಿದ್ದಾರೆ. ಕೈಯಲ್ಲಿದ್ದ ಮಗುವನ್ನ ಕದ್ದೊಯ್ದಿದ್ದಾರೆ ಎಂದು ಮಗುವಿನ ತಾಯಿ ಉಮ್ಮೇ ಜೈನಾಬ್ ಹುಸೇನ್ ಸಾಬ್ ಶೇಖ್ ಎಂಬುವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನು ಕುಂದಗೋಳದ ನೆಹರೂ ನಗರದ ಮಹಿಳೆ ಉಮ್ಮೇ ಜೈನಾಬ್ ಶೇಖ್ ಎಂಬುವರು ಕಳೆದ ಜೂ.10ರಂದು ಕಿಮ್ಸ್‌ಗೆ ಮಗುವಿನ ಜೊತೆಗೆ ದಾಖಲಾಗಿದ್ದು, ಹೆಮೊರಾಜಿಕಲ್ ಡಿಸೀಸ್ ಆಫ್ ನ್ಯೂ ಬಾರ್ನ್ ರೋಗದಿಂದ ಬಳಲುತ್ತಿದ್ದ ಮಗುವಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ಜನಿಸಿದ ಮಗುವಿನ ತೂಕ ಹೆಚ್ಚಿಸುವ ಉದ್ದೇಶದಿಂದ ಕಿಮ್ಸ್ ಗೆ ದಾಖಲು ಮಾಡಲು ವೈದ್ಯರು ಹೇಳಿದ್ದರು.
ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಕಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಆದರೆ ದುಷ್ಕರ್ಮಿಗಳು ಏಕಾಏಕಿ ತಾಯಿಯ ಕೈಯಲ್ಲಿದ್ದ ಮಗುವನ್ನು ಕದ್ದೊಯ್ದಿರೋದಾಗಿ ಪಾಲಕರ ಆರೋಪಿಸಿದ್ದಾರೆ.
Kshetra Samachara
13/06/2022 04:13 pm