ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೊಲೆ ಪ್ರಕರಣ ಮುಚ್ಚಿ ಹಾಕಲು ನಡೆದಿತ್ತಾ ಷಡ್ಯಂತ್ರ?

ಧಾರವಾಡ: ಧಾರವಾಡ ತಾಲೂಕಿನ ಹಂಗರಕಿ ಗ್ರಾಮದಲ್ಲಿ ನಡೆದಿದ್ದ ವ್ಯಕ್ತಿಯ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಇದು ಸಹಜ ಸಾವಲ್ಲ ಇದೊಂದು ಕೊಲೆ ಎಂದು ದೂರು ದಾಖಲಾದ ಬಳಿಕ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಹಂಗರಕಿ ಗ್ರಾಮದ ರಾಮಪ್ಪ ಕೆಳಗಡೆ ಎಂಬಾತನನ್ನು ಕೆಲವರು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಿದ್ದರಂತೆ. ರಾಮಪ್ಪನನ್ನು ಮನೆಯಿಂದ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಆ ವ್ಯಕ್ತಿಗಳು ರಾಮಪ್ಪನ ಮೇಲೆ ಹಲ್ಲೆ ಮಾಡುತ್ತಲೇ ಕರೆದುಕೊಂಡು ಹೋಗಿದ್ದರಂತೆ. ಇದಕ್ಕೆ ಹಣದ ವ್ಯವಹಾರ ಮುಖ್ಯ ಕಾರಣ ಎಂದು ತಿಳಿದು ಬಂದಿದೆ. ಬೆಳಗಿನಜಾವ ರಾಮಪ್ಪನನ್ನು ಮನೆಯಿಂದ ಕರೆದುಕೊಂಡು ಹೋದ ಆ ವ್ಯಕ್ತಿಗಳು ಸಂಜೆ ಕೆಲಗೇರಿ ರೈಲ್ವೆ ಗೇಟ್‌ ಬಳಿ ರಾಮಪ್ಪನ ಮೃತ ದೇಹ ಎಸೆದು ಹೋಗಿದ್ರಂತೆ.

ಆನಂತರ ಮನೆಯವರು ಸ್ಥಳಕ್ಕೆ ಹೋಗಿ ಆ ಶವ ತಂದಿದ್ದಾರೆ. ಮನೆಯವರ ಜೊತೆ ಆರೋಪಿಯೂ ಹೋಗಿದ್ದ ಎಂದು ಗೊತ್ತಾಗಿದೆ. ಮೃತನ ಹೆಂಡತಿಯಿಂದ, ರಾಮಪ್ಪ ಮದ್ಯ ಕುಡಿದು ಸತ್ತಿದ್ದಾನೆ ಎಂದು ದೂರು ದಾಖಲಿಸಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ನಡೆದಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಆದರೆ, ರಾಮಪ್ಪನ ಅಳಿಯ ಇದು ಸಹಜ ಸಾವಲ್ಲ. ಇದೊಂದು ಕೊಲೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಬೇಕು ಎಂದು ದೂರು ಕೊಟ್ಟಿದ್ದರಿಂದ ಈ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಎಸ್‌ಸಿ, ಎಸ್‌ಟಿ ಅಡಿ ಈ ಪ್ರಕರಣ ಬರುವುದಿಂದ ಡಿವೈಎಸ್‌ಪಿ ಸಂಕದ ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ರಾಮಪ್ಪನ ಶವವನ್ನು ಮನೆಗೆ ತಂದಾಗ ಆತನ ಶವದ ಮೇಲೆ ಗಾಯದ ಗುರುತುಗಳೂ ಇದ್ದವು. ಬೆಳಿಗ್ಗೆ ಆತನನ್ನು ಕರೆದುಕೊಂಡು ಹೋದವರು ವಾಪಸ್ ತಂದು ಬಿಟ್ಟಿರಲಿಲ್ಲ. ಸಂಜೆ ಹೊತ್ತಿಗೆ ಆತ ಶವವಾಗಿ ಪತ್ತೆಯಾಗಿದ್ದಾನೆ. ಈ ಸಾವಿನ ಬಗ್ಗೆ ಸಂಶಯ ಇದೆ ಎಂದು ಆತನ ಕುಟುಂಬಸ್ಥರು ಹನುಮಂತಪ್ಪ ಜುಮ್ಮನ್ನವರ ಎಂಬುವವರ ಮೇಲೆ ಇದೀಗ ಗರಗ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದು ಕೊಲೆಯೋ ಅಥವಾ ಸಹಜ ಸಾವೋ ಎಂಬುದನ್ನು ಪೊಲೀಸರು ಪತ್ತೆ ಮಾಡಬೇಕಿದೆ.

Edited By : Somashekar
Kshetra Samachara

Kshetra Samachara

28/05/2022 11:48 am

Cinque Terre

32.31 K

Cinque Terre

1

ಸಂಬಂಧಿತ ಸುದ್ದಿ