ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಗಣೇಶ ಪೇಟ್ ನಿವಾಸಿ ಮಹಮ್ಮದ್ ಅಲಿಪ್ ಅಬ್ದುಲ್ ಹಮ್ಮಿದ್ ಎಂಬಾತ ಪಾಲಿಕೆಯಲ್ಲಿದ್ದ ವಾಹನಗಳ ಮೇಲೆ ಕಲ್ಲಿನಿಂದ ದಾಳಿ ನಡೆಸಿದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಕಲ್ಲುಗಳನ್ನು ಹುಡುಕಿಕೊಂಡು ಬಂದು ಕಾರು ಮತ್ತು ಕಸದ ವಾಹನದ ಮೇಲೆ ದಾಳಿ ಮಾಡಿದ ವಿಡಿಯೋ ಇದೀಗ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಾಸಕ ಪ್ರಸಾದ ಅಬ್ಬಯ್ಯ ಮತ್ತು ಕಮೀಷನರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಪಾಲಿಕೆ ವಾಹನಗಳ ಮೇಲೆ ಕಲ್ಲಿನಿಂದ ದಾಳಿ ಮಾಡಿದ ಪರಿಣಾಮ ಮೂರು ವಾಹನಗಳ ಗ್ಲಾಸ್‌ಗಳು ಪುಡಿ ಪುಡಿಯಾಗಿವೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಮಹಮ್ಮದ್ ಅಲಿಪ್‌ನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/05/2022 02:12 pm