ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾವಿಗಾಗಿ ಕಾಯುತ್ತಿದೆ ಮೃತ್ಯುಕೂಪದ ಹೆದ್ದಾರಿ: 12 ವರ್ಷಗಳಲ್ಲಿ 390 ಜೀವಗಳು ಬಲಿ

ಹುಬ್ಬಳ್ಳಿ: ಈ ರಸ್ತೆಯಲ್ಲಿ ನೀವು ಪ್ರಯಾಣ ಮಾಡಬೇಕು ಅಂದರೆ ನಿಮ್ಮ ಹಣೆಬರಹ ಗಟ್ಟಿಯಾಗಿರಬೇಕು. ಎಷ್ಟೇ ಜಾಗೃತರಾಗಿದ್ರೂ ಅಪಘಾತ ಕಟ್ಟಿಟ್ಟ ಬುತ್ತಿ. ಮೃತ್ಯಕೂಪದಂತಿರೋ ಈ ಸಾವಿನ ಹೆದ್ದಾರಿ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ಸ್ಪೋಟಕ ಮಾಹಿತಿ..

ಹೌದು..ಹುಬ್ಬಳ್ಳಿ ಮತ್ತು ಧಾರವಾಡ ನಡುವಿನ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 12 ವರ್ಷಗಳಲ್ಲಿ 390 ಜೀವಗಳು ಬಲಿಯಾಗಿವೆ. 2009ರಿಂದ ಈವರೆಗೆ 1,200ಕ್ಕೂ ಹೆಚ್ಚು ಅಪಘಾತಗಳು ನಡೆದಿದ್ದು, ಅವುಗಳಲ್ಲಿ 320 ಗಂಭೀರ ಸ್ವರೂಪದ ಅಪಘಾತಗಳು, 850ಕ್ಕೂ ಹೆಚ್ಚು ಸಾಧಾರಣ ಅಪಘಾತಗಳು ನಡೆದಿವೆ. 1,600 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ 300ಕ್ಕೂ ಹೆಚ್ಚು ಮಂದಿ ಶಾಶ್ವತ ಅಂಗವಿಕಲರಾಗಿದ್ದಾರೆ. ಗಬ್ಬೂರು ಕ್ರಾಸ್‌ನಿಂದ ಧಾರವಾಡದ ನರೇಂದ್ರ ಕ್ರಾಸ್‌ವರೆಗಿನ ಬೈಪಾಸ್‌ ರಸ್ತೆ ಉದ್ದ 29.04 ಕಿ.ಮೀ.ಮಾತ್ರ. ದ್ವಿಪಥ ಇರುವ ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅವೈಜ್ಞಾನಿಕವಾಗಿರುವ ಈ ಕಿರಿದಾದ ರಸ್ತೆ ರಾತ್ರಿ ವೇಳೆ ಸದಾ ಅಪಾಯವನ್ನೇ ಹೊಂಚು ಹಾಕುತ್ತಿರುತ್ತದೆ. ಸಾರ್ವಜನಿಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಾವಿನ ಹೆದ್ದಾರಿ ಹಣೆಪಟ್ಟಿ ಕಳಚಲು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ ಜೋಶಿ ಅವರು ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ 6 ತಿಂಗಳು ಕಳೆದರೂ ಈವರೆಗೆ ಕಾಮಗಾರಿ ಆರಂಭವಾಗಿಲ್ಲ.

ಒಟ್ಟಿನಲ್ಲಿ ಬೈಪಾಸ್ ರಸ್ತೆಯಲ್ಲಿ ಸಾವಿನ ಸರಮಾಲೆಯೇ ನಡೆಯುತ್ತಿದೆ. ಸರ್ಕಾರ ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಿ ಜನರ ಪ್ರಾಣ ಉಳಿಸಬೇಕಾಗಿದೆ.

Edited By : Somashekar
Kshetra Samachara

Kshetra Samachara

25/05/2022 02:32 pm

Cinque Terre

58 K

Cinque Terre

15

ಸಂಬಂಧಿತ ಸುದ್ದಿ