ಹುಬ್ಬಳ್ಲಿ: ಆತ ತಾನು ಆಯಿತು ತನ್ನ ಕೆಲಸ ಆಯಿತು ಅಂತ ಇದ್ದವನು. ಯಾರ ತಂಟೆಗೂ ಹೋಗದೆ ಸುಖಕರ ಜೀವನ ಸಾಗಿಸುತ್ತಿದ್ದ. ಅದ್ಯಾರ ಕಣ್ಣು ಬಿತ್ತೊ ಗೊತ್ತಿಲ್ಲ. ನಿನ್ನೆ ಗುಟ್ಕಾ ವಿಚಾರಕ್ಕೆ ಭೀಕರ ಕೊಲೆಯಾಗಿದ್ದಾನೆ.
ಹೌದು.ಹೀಗೆ ಕೊಲೆಯಾಗಿ ಬಿದ್ದಿರುವ ಈತನ ಹೆಸರು ಮೆಹಬೂಬ್ ಸಾಬ್. ನಗರದ ಆನಂದ ನಗರ ನಿವಾಸಿ. ಸುಮಾರು ವರ್ಷಗಳಿಂದ ಆನಂದ ನಗರದಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡು ಉತ್ತಮ ಜೀವನ ನಡೆಸುತ್ತಿದ್ದ. ಆದರೆ ನಿನ್ನೆ ಹಳೆ ಹುಬ್ಬಳ್ಳಿಯ ಆನಂದನಗರದ ಪಾನ್ ಶಾಪ್ ಬಳಿ ಗುಟ್ಕಾ ತಿನ್ನುವ ವಿಚಾರವಾಗಿ, ರೌಡಿ ಶೀಟರ್ ಗೌಸ್ ಮೊಹಿದಿನ್ ತಹಶೀಲ್ದಾರ ಎಂಬಾತ
ಮೆಹಬೂಬ್ ಸಾಬ್ ಗೆ ಚಾಕು ಹಾಕಿ ಎಸ್ಕೇಪ್ ಆಗಿದ್ದಾನೆ.
ಗಂಭೀರ ಗಾಯಗೊಂಡು ರಕ್ತದ ಮೊಡವಿನಲ್ಲಿ ಬಿದ್ದಿದ್ದ ಮೆಹಬೂಬ್ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೆಹಬೂಬ್ ಸಾಬ್ ಕಳಸದ ಸಾವನ್ನಪ್ಪಿದ್ದಾನೆ. ಇನ್ನು ಮಗನನ್ನು ಕಳೆದುಕೊಂಡ ಪೋಷಕರು ಈಗ ಕಣ್ಣೀರು ಹಾಕುತ್ತಿದ್ದಾರೆ.
ಇನ್ನು ಮೆಹಬೂಬ್ ಸಾಬ್ ಕೊಲೆ ಮಾಡಿರುವ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ಈಗಾಗಲೇ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕೊಲೆ ಮಾಡಿದವರನ್ನು ಹುಡುಕುವ ಕಾರ್ಯ ಮಾಡುತ್ತಿದ್ದಾರೆ. ಕೂಡಲೆ ಅವರನ್ನು ಬಂಧಿಸಿ ತಕ್ಕ ಶಿಕ್ಷೆ ನೀಡಬೇಕೆಂದು ಕುಟುಂಬಸ್ಥರು ಒತ್ತಾಯ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಚಿಕ್ಕ ಗುಟ್ಕಾ ವಿಚಾರಕ್ಕೆ ಭೀಕರ ಕೊಲೆಯಾಗಿರೋದು ನೋಡಿದರೆ, ಹುಬ್ಬಳ್ಳಿ ಮಿನಿ ಬಿಹಾರ ಆಗುತ್ತಿದೆಯಾ ಎಂಬ ಪ್ರಶ್ನೆ ಉದ್ಭವ ಆಗುತ್ತಿದೆ. ಆದ್ದರಿಂದ ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕಿದೆ.ಇಂತಹ ಕೃತ್ಯ ಎಸಗುತ್ತಿರುವ ಹಂತಕರಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬುದು ಜನರ ಒತ್ತಾಯವೂ ಆಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/05/2022 02:34 pm