ಧಾರವಾಡ:ಮೆಹಬೂಬ್ ನಗರದ ಗಾದಿ ಕಾರ್ಖಾನೆಯ ಬಳಿ ಬ್ಯಾನರ್‌ನಲ್ಲಿ ಹಾಕಲಾಗಿದ್ದ ಫೋಟೋ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡ ಉಪನಗರ ಠಾಣೆಯಲ್ಲಿ 14 ಜನರ ವಿರುದ್ಧ ದೂರು ದಾಖಲಾಗಿದೆ.
ಧಾರವಾಡದ ಫೈರೋಜ್ ಪಠಾಣ್, ಅಬ್ದುಲ್ ದೇಸಾಯಿ, ಮೈನುದ್ದೀನ್ ನದಾಫ್, ತೌಸಿಫ್ ಶೇಖ್, ಕೃಷ್ಣಾ ಗುಮ್ಮಗೋಳ, ಅಜ್ಗರ್ ಮುಲ್ಲಾ, ಇಕ್ಬಾಲ್ ತಮಟಗಾರ, ಅಲ್ತಾಫ್ ತಮಟಗಾರ, ಜಾವೇದ್ ತಮಟಗಾರ, ಶಮೀನ್ ಕಾಟೇವಾಡೆ, ಅಬ್ಬಾಸ್ ಮುಲ್ಲಾ, ವರುಣ ಸಮ್ರಾಣಿ, ಸಿದ್ದಯ್ಯ ಭಾವಿಮಠದ, ಸಮೀವುಲ್ಲಾ ಬಳ್ಳಾರಿ ಸೇರಿದಂತೆ ಇತರರ ವಿರುದ್ಧ ದೂರು ದಾಖಲಾಗಿದೆ.
ಧಾರವಾಡದ ಮೆಹಬೂಬ್ ನಗರ ಕಾದಿ ಕಾರ್ಖಾನೆ ಬಳಿ ಹಾಕಲಾಗಿದ್ದ ಬ್ಯಾನರ್‌ನಲ್ಲಿ ಫೋಟೋ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಅಲ್ಲದೇ ಈ ಮೊದಲು ಫೋನ್‌ನಲ್ಲಿಯೂ ಪರಸ್ಪರ ಬೈದಾಡಿಕೊಂಡಿದ್ದರು. ಮೇ.12 ರಂದು ಮೆಹಬೂಬ್ ನಗರದ ಸೋನಾಪುರದಲ್ಲಿನ ಫೈರೋಜ್ ಪಠಾಣ್ ಎಂಬುವವರ ಮನೆ ಎದುರು ಎರಡೂ ಗುಂಪಿನ ಯುವಕರು ಸೇರಿ ಗಲಾಟೆ ಮಾಡಿದ್ದಾರೆ.
ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಉಪನಗರ ಠಾಣೆ ಪಿಎಸ್‌ಐ ಶ್ರೀಮಂತ ಹುಣಸಿಕಟ್ಟಿ ಅವರು ಘಟನೆ ಕುರಿತು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
Kshetra Samachara
16/05/2022 11:10 am