ಹುಬ್ಬಳ್ಳಿ: ಹಿಂದೂ ಮುಸ್ಲಿಂ ಜನರು ಸಹೃದಯತೆಯಿಂದ ನಡೆದುಕೊಂಡು ಯಾವುದೇ ಹಬ್ಬ ಹರಿದಿನ ಬಂದರೂ ಎಲ್ಲರೂ ಕೈ ಜೋಡಿಸುತ್ತಿದ್ದ ನಗರ ಅವಳಿ ನಗರ.ಆದರೆ ಎಲ್ಲಿಂದಲೋ ಬಂದ ಆ ಕೈಗಳು ನಿಜಕ್ಕೂ ಅವಳಿನಗರದಲ್ಲಿ ಆಶಾಂತಿಯನ್ನು ಹುಟ್ಟು ಹಾಕಿದ್ದವು. ಆದರೆ ಈ ಅಶಾಂತಿ ಹುಟ್ಟು ಹಾಕಿದ್ದವರನ್ನು ಪೊಲೀಸರು ಮಟ್ಟ ಹಾಕಿರುವ ರೋಚಕ ಸ್ಟೋರಿಯೊಂದನ್ನು ತೋರಿಸ್ತೀವಿ ನೋಡಿ.
ಅಂದು ಏಪ್ರಿಲ್ 16ರ ರಾತ್ರಿ ನಡೆದ ಮುಸ್ಲಿಂ ಪುಂಡರ ಹಿಂಸಾತ್ಮಕ ಹೋರಾಟಕ್ಕೆ ಪ್ರೇರಣೆ ನೀಡಿದ್ದು ಯಾರು..? ಯಾವ ಸಂಘಟನೆ ಗಲಭೆಯ ಸಂಚು ರೂಪಿಸಿತ್ತು ಅನ್ನೊದು ಕೇಳಿದ್ರೆ ಬೆಚ್ಚಿಬೀಳೋದು ಗ್ಯಾರಂಟಿ..! ಹೌದು, ಹುಬ್ಬಳ್ಳಿ ಗಲಭೆಗೆ ಮಹಾರಾಷ್ಟ್ರ ಮೂಲದ ರಜಾ ಅಕಾಡೆಮಿಯ ಕೈವಾಡ ಇರುವ ಶಂಕೆ ವ್ಯಕ್ತವಾಗುತ್ತಿದೆ. ಮಾಸ್ಟರ್ ಮೈಂಡ್ ವಸೀಮ್ ಪಠಾಣ್ ಹಾಗೂ ಆತನ ಸಹಚರರು ಗುರುತಿಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ರಜಾ ಅಕಾಡೆಮಿಯಲ್ಲಿಯೇ ಎಂಬುವಂತ ಸತ್ಯ ಬೆಳಕಿಗೆ ಬಂದಿದೆ.
ಕಟ್ಟರ್ ಮುಸ್ಲಿಂ ವಾದಿಗಳ ಸಂಘಟನೆ ರಜಾ ಅಕಾಡೆಮಿ 1978 ರಲ್ಲಿ ಮಹಾರಾಷ್ಟ್ರ ಮುಂಬಯಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಘಟನೆ ಸಾಮಾಜಿಕ ಕಾರ್ಯದ ಹೆಸರಲ್ಲಿ ಹುಟ್ಟಿಕೊಂಡ ಸಂಘಟನೆ ಇದು. ಆದ್ರೇ ಹುಬ್ಬಳ್ಳಿ ಗಲಭೆಯಲ್ಲಿ ರಜಾ ಅಕಾಡೆಮಿ ಸದಸ್ಯರ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಸಮಾಜ ಸೇವೆ ಹೆಸರಲ್ಲಿ ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕಲು ಕೈ ಜೋಡಿಸಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.
ಇನ್ನೂ ಮುಂಬೈ ಮೂಲದ ರಜಾ ಅಕಾಡೆಮಿಯನ್ನು ಹುಬ್ಬಳ್ಳಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದವರು ಇದೇ ವಸೀಮ್ ಪಠಾಣ್ ಹಾಗೂ ತೌಫೀಲ್ ಮುಲ್ಲಾ, ಹಾಗೂ ರೌಡಿ ಅಹ್ಮದ್ ಮಲ್ಲಿಕ್ ಬೇಪಾರಿ. ಈ ಮೂರು ಜನರು ಇದೇ ರಜಾ ಅಕಾಡೆಮಿಯ ಸದಸ್ಯರು. ಅದೇ ಕಾರಣಕ್ಕೆ ಗಲಭೆಯ ಬಳಿಕ ವಸೀಮ್ ಪಾಠಾಣ್ ಮುಂಬೈಗೆ ಹಾರಿದ್ದ. ರಜಾ ಅಕಾಡೆಮಿ ಸದಸ್ಯರ ನೆರವು ಪಡೆದು ಅವಿತುಕುಳಿತಿದ್ದ ವಸೀಮ್ ನನ್ನು ಬೆಳಗಾವಿಯಿಂದ ಪೊಲೀಸರು ಹುಬ್ಬಳ್ಳಿಗೆ ಕರೆತಂದಿದ್ದಾರೆ.
ರಜಾ ಅಕಾಡೆಮಿ ಟ್ವಿಟರ್ ಹ್ಯಾಂಡಲ್ ರೀ ಬಿಲ್ಡ್ ಬಾಬರೀ ಮಸೀದಿ ಕ್ಯಾಂಪೇನ್ ಕೂಡ ಮಾಡಿತ್ತು. ಡಿಸೆಂಬರ್ ತಿಂಗಳಲ್ಲಿ "ರೀ ಬಿಲ್ಡ್ ಬಾಬರಿ" ಮಸೀದಿ ಕ್ಯಾಂಪೇನ್ ಮಾಡಿದ್ದ ರಜಾ ಅಕಾಡೆಮಿ. ಹುಬ್ಬಳ್ಳಿ ಗಲಭೆ ಪೂರ್ವ ನಿಯೋಜಿತ ಕೃತ್ಯ ಎನ್ನುವುದನ್ನು ಬಯಲು ಮಾಡಿದೆ. ಹಳೇ ಹುಬ್ಬಳ್ಳಿ ಠಾಣೆ ಮುಂದೆ ಜಮಾಯಿಸಿ- ಗಲಭೆ ಸೃಷ್ಟಿಸುವ ಪ್ಲಾನ್ ಮಾಡಿದ್ದ ವಸೀಂ ಪಠಾಣ್ ಹಾಗೂ ಆತನ ಸಹಚರರ ಪ್ಲಾನ್ ಇದ್ದದ್ದೇ ಬೇರೆ.
ಹನುಮಾನ್ ಜಯಂತಿ ದಿನ ಪ್ರತಿಭಟನೆ ಹೆಸರಲ್ಲಿ ಗಲಭೆ ಎಬ್ಬಿಸುವ ಪ್ಲಾನ್ ಮಾಡಿದ್ದ ವಸೀಮ್ ಹಾಗು ಆತನ ಸಹಚರರು,ಶ್ರೀರಾಮನವಮಿ ದಿನ ಹಿಂದೂ ಸಂಘಟನೆಗಳು ಲೇಸರ್ ಶೋ ನಡೆಸಿದ್ದರು. ಈ ವೇಳೆ ಶ್ರೀರಾಮ ಎಂದು ಬರೆದ ಲೇಸರ್ ಬರಹ ಮಸೀದಿಗೆ ಗೋಡೆ ಮೇಲೆ ಬಿಡಲಾಗಿತ್ತು. ಈ ವಿಚಾರ ಇಟ್ಟುಕೊಂಡು ಪ್ರತಿಭಟನೆಗೆ ಪ್ಲಾನ್ ಮಾಡಿದ್ದರು. ಅದಕ್ಕಾಗಿ ಒಂದು ವಾಟ್ಸಪ್ ಗ್ರೂಪ್ ರಚಿಸಿ ಹನುಮಾನ್ ಜಯಂತಿ ದಿನದಂದು ಸಭೆ ಸೇರೋಣ ಎಂದಿದ್ದ ವಸೀಮ್.
ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರು ಬದ್ದರಾಗಿರಬೇಕು ಎಂದಿದ್ದ ಆದರೇ ಅದೇ ದಿನ ಅಭಿಷೇಕ ಹಿರೇಮಠ ವಿವಾದಾತ್ಮಕ ಪೋಸ್ಟ್ ಚರ್ಚೆಗೆ ಬಂದಿತ್ತು. ಈ ವಿಚಾರ ತಿಳಿಯುತ್ತಲೇ ಹಳೆಹುಬ್ಬಳ್ಳಿ ಠಾಣೆಗೆ ಧಾವಿಸಿ ಬಂದಿದ್ದ ವಸೀಮ್ ಪಠಾಣ್ ಗಲಾಟೆಗೆ ಪ್ರಚೋದನೆ ನೀಡಿದ್ದ ಆದರೆ ಇದರಲ್ಲಿ ನನ್ನ ಕೈವಾಡ ಇಲ್ಲವೆಂದು ಸಮಜಾಯಿಷಿ ಕೂಡ ನೀಡಿದ್ದ.
ದಾಳಿಗೂ ಮುನ್ನ ಯುವಕರ ಬ್ರೇನ್ ವಾಶ್ ಮಾಡಿದ್ದ ವಸೀಮ್ ಪಠಾಣ್. ಇಸ್ಲಾಂ ಧರ್ಮದ ಮೇಲೆ ಅನ್ಯಾಯ ನಡೆಯುತ್ತಿದೆ ಇದನ್ನು ಪ್ರತಿಭಟಿಸಬೇಕು ಎಂದು ಕರೆ ನೀಡಿದ್ದ. ಅಷ್ಟರಲ್ಲಾಗಲೇ ಬೆಂಕಿ ಹೊತ್ತಿಕೊಂಡಿತ್ತು. ಮತ್ತಷ್ಟು ತುಪ್ಪ ಸುರಿದ ವಾಸೀಂ ಶಾಂತಿ ಹಾಲಿಗೆ ವಿಷ ಬೆರೆಸಿದ್ದ.
ಒಟ್ಟಿನಲ್ಲಿ ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬುವಂತ ಮಾತಿಗೆ ಅನುಗುಣವಾಗಿ ಪೊಲೀಸರು ವಾಸೀಂ ಪಠಾಣ್ ಎಂಬಾತನನ್ನು ಹೆಡೆಮುರಿ ಕಟ್ಟಿಕೊಂಡು ಹುಬ್ಬಳ್ಳಿಗೆ ತಂದಿದ್ದು, ತನಿಖೆಯ ನಂತರವೇ ಮತ್ತಷ್ಟು ಕಾಣದ ಕೈಗಳ ಕೈವಾಡ ಬಯಲಾಗಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/04/2022 11:11 pm