ಹುಬ್ಬಳ್ಳಿ: ಅಭಿಷೇಕ ಹಿರೇಮಠ ಜಾಮೀನು ಪರವಾಗಿ ವಾದ ವಿವಾದ ಮಾಡಲಾಗಿತ್ತು. ಆದರೇ ನಮ್ಮ ಅರ್ಜಿ ವಜಾ ಆಗಿದೆ. ನಾಲ್ಕನೇ ಜೆ.ಎಂ.ಎಫ್.ಸಿ ನ್ಯಾಯಾಧೀಶರ ಆದೇಶ ಪ್ರಶ್ನಿಸಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೆವೆ ಎಂದು ವಿವಾದಾತ್ಮಕ ಪೋಸ್ಟ ಮಾಡಿದ್ದ ಅಭಿಷೇಕ ಪರ ವಕೀಲರು ಸಂಜಯ ಬಡಾಸ್ಕರ್ ಹೇಳಿದರು.
ಅಭಿಷೇಕ ಹಿರೇಮಠ ಅರ್ಜಿ ತಿರಸ್ಕಾರ ಮಾಡಿರುವ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಅಭಿಷೇಕ ಹಿರೇಮಠ ಜಾಮೀನು ವಾದ ವಿವಾದ ಮಾಡಲಾಗಿತ್ತು. ನಮ್ಮ ಅರ್ಜಿ ವಜಾ ಆಗಿದೆ. ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದೆವೆ. ಈಗ ಅಭಿಷೇಕ ಜಾಮೀನು ಕೊಡುವದು ಸೂಕ್ತ ಅಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಅವರು ಹೇಳಿದರು.
ವಿಚಾರಣೆ ಹಂತದಲ್ಲಿ ಇರುವ ಕಾರಣ ಜಾಮೀನು ಸೂಕ್ತ ಅಲ್ಲ ಎಂದಿರುವ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಅಭಿಷೇಕ ಹಿರೇಮಠ ಜಾಮೀನು ಕೊಡಿಸುವ ಭರವಸೆ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/04/2022 08:49 pm