ಧಾರವಾಡ: ಧಾರವಾಡದಲ್ಲಿ ಇಂದು ಜೆಸಿಬಿಗಳು ಮತ್ತೆ ಸದ್ದು ಮಾಡಿವೆ. ಧಾರವಾಡದಿಂದ ನವಲಗುಂದಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ನಿರ್ಮಿಸಲಾಗಿರುವ ಅಕ್ರಮ ಲೇಔಟ್‌ಗಳನ್ನು ಹುಬ್ಬಳ್ಳಿ, ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇಂದು ತೆರವುಗೊಳಿಸಲಾಗಿದೆ.
ಇವತ್ತು ಮತ್ತು ನಾಳೆ ಒಟ್ಟು 36 ಅಕ್ರಮ ಲೇಔಟ್‌ಗಳನ್ನು ಹುಡಾ ತೆರವುಗೊಳಿಸಲಿದೆ. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ನೇತೃತ್ವದಲ್ಲಿ ಈ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಪೊಲೀಸ್ ಬಂದೋಬಸ್ತ್ ಮಧ್ಯೆ ಅಕ್ರಮ ಲೇಔಟ್‌ಗಳನ್ನು ತೆರವುಗೊಳಿಸಲಾಗುತ್ತಿದೆ.
ನವಲಗುಂದ ರಸ್ತೆಯಲ್ಲಿನ ಅಕ್ರಮ ಲೇಔಟ್ ತೆರವುಗೊಳಿಸುವ ವೇಳೆ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಹಾಗೂ ಪಾಲಿಕೆ ಸದಸ್ಯ ಶಂಭು ಸಾಲಿಮಠ ಅವರ ಮಧ್ಯೆ ತೀವ್ರ ಮಾತಿನ ಚಕಮಕಿಯೇ ನಡೆದಿದೆ.
ಉದ್ದೇಶ ಪೂರ್ವಕವಾಗಿ ಲೇಔಟ್ ತೆರವುಗೊಳಿಸಲಾಗುತ್ತಿದೆ. ಈ ಹಿಂದೆ ತೆರವುಗೊಳಿಸಿದ ಲೇಔಟ್‌ಗಳನ್ನು ಏನು ಮಾಡಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಿ. ಈಗ ತೆರವುಗೊಳಿಸಿ ಕೂಡಲೇ ನಮ್ಮ ಲೇಔಟ್‌ಗಳನ್ನು ಎನ್‌ಎ ಮಾಡಿಕೊಡಿ. ಬೇರೆ ಬೇರೆ ಕಡೆಗಳಲ್ಲಿ ಆದ ಲೇಔಟ್‌ಗಳನ್ನು ಹಾಗೇ ಬಿಟ್ಟಿದ್ದೀರಿ ನಮ್ಮ ಲೇಔಟ್‌ಗಳನ್ನು ಉದ್ದೇಶಪೂರ್ವಕವಾಗಿ ತೆರವು ಮಾಡುತ್ತಿದ್ದೀರಿ ಎಂದು ಪಾಲಿಕೆ ಸದಸ್ಯ ಶಂಭು ಹುಡಾ ಅಧ್ಯಕ್ಷ ಕಲಬುರ್ಗಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ನಂತರ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ ಲೇಔಟ್ ತೆರವುಗೊಳಿಸಲು ಅನುವು ಮಾಡಿಕೊಟ್ಟರು.
Kshetra Samachara
28/01/2022 04:09 pm