ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿಚಾರಣೆಗೆ ಹಾಜರಾಗಲು ಕೃಷಿ ವಿವಿ ಕುಲಪತಿಗೆ ಹೈಕೋರ್ಟ್ ಆದೇಶ

ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹಾದೇವ ಚೆಟ್ಟಿ ಮಹಿಳೆಯೊಬ್ಬರ ಮೇಲೆ ಮಾನಭಂಗಕ್ಕೆ ಯತ್ನಿಸಿ ಕೊಲೆಗೆ ಪ್ರಯತ್ನಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯಾಗಿದ್ದು, ಅವರೂ ಸೇರಿದಂತೆ 7 ಜನರು ವಿಚಾರಣೆಗೆ ಹಾಜರಾಗಬೇಕು ಎಂದು ಧಾರವಾಡದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.

ಕೆಳ ಹಂತದ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಹುಬ್ಬಳ್ಳಿಯ ಶ್ರೀಮತಿ ನಟಾಲಿಯಾ ಅಲಿಯಾಸ್ ನೇತ್ರಾ ಬಸವರಾಜ ಗಿರೆಣ್ಣವರ ಸಲ್ಲಿಸಿದ ಮೇಲ್ಮನವಿಯ (ಕ್ರಿಮಿನಲ್ ರಿವಿಜನ್ ಪಿಟಿಶನ್ ನಂ. 13/2020)ರ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಮಹತ್ವದ ಆದೇಶ ನೀಡಿದೆ.

ನಟಾಲಿಯಾ ಅವರ ಮನವಿಯನ್ನು ಎತ್ತಿ ಹಿಡಿದು, ನ್ಯಾಯಾಲಯವು ವಿಚಾರಣೆಗೆ ಸೂಚಿಸಿರುವುದರಿಂದ ಅಲ್ಲದೇ ಕ್ರಿಮಿನಲ್ ಆಪಾದನೆಗಳಿರುವುದರಿಂದ ಮತ್ತೆ ಕುಲಪತಿ ಡಾ. ಚೆಟ್ಟಿಯವರಿಗೆ ಸಂಕಷ್ಟ ಎದುರಾಗಿದೆ. ಅಲ್ಲದೇ ಧಾರವಾಡ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖುದ್ದು ವಿಚಾರಣೆಗೆ ಹಾಜರಾಗಬೇಕಿದೆ.

2014 ರಲ್ಲೇ ಧಾರವಾಡ ಉಪನಗರ ಠಾಣೆಯಲ್ಲಿ ಬಸವರಾಜ ಗಿರೆಣ್ಣವರ, ಮಂಜುನಾಥ ಗಿರೆಣ್ಣವರ, ಅಭಿನೇತ್ರಿ ಮಹಾದೇವ ಚೆಟ್ಟಿ, ಮಹಾದೇವ ಚೆಟ್ಟಿ ಸೇರಿದಂತೆ 10 ಜನರ ವಿರುದ್ಧ ಎಫ್‌ಐಆರ್ (ನಂ. 0159/ 2014) ದಾಖಲಾಗಿತ್ತು. ನಟಾಲಿಯಾ ತಮ್ಮ ಪತಿ, ಮೈದುನರು ಹಾಗೂ ಹಾಲಿ ಕೃಷಿ ವಿ.ವಿ.ಕುಲಪತಿ ಮಹಾದೇವ ಚೆಟ್ಟಿ ಮುಂತಾದವರ ಕುಮ್ಮಕ್ಕಿನಿಂದ ನಿರಂತರ ದೈಹಿಕ ಹಲ್ಲೆ, ಮಾನಸಿಕ ಹಿಂಸೆ, ವರದಕ್ಷಿಣೆ ನೀಡಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಬೈದಾಡಿ ರಿವಾಲ್ವರ್ ತೋರಿಸಿ ಕೊಲೆಗೆ ಪ್ರಯತ್ನಿಸಿರುವುದಾಗಿ ದೂರಿನಲ್ಲಿ ಹೇಳಿದ್ದರು.

ಮಹಾದೇವ ಚೆಟ್ಟಿಯ ಪತ್ನಿ ಅಭಿನೇತ್ರಿ ಚೆಟ್ಟಿ ಮಧ್ಯಸ್ಥಿಕೆಯಲ್ಲಿ ತಮ್ಮ ವಿವಾಹ 19-06-2011ರಂದು ಬಸವರಾಜ ಗಿರೆಣ್ಣವರ ಆಗಿದ್ದು, ತದನಂತರ ತನ್ನ ಪತಿ ಇತರರ ಕುಮ್ಮಕ್ಕಿನಿಂದ ಕೊಲೆಗೆ ಯತ್ನಿಸಿದ್ದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಚಾಲೂ ಮಾಡಿ ಕೊಲೆಗೆ ಸಹ ಯತ್ನಿಸಿದ್ದಾಗಿ ಆರೋಪಿಸಿದ್ದರು.

ಉಪನಗರ ಪೊಲೀಸರು ಆರೋಪಿಗಳ ಹೆಸರನ್ನು ಎಫ್‌ಐಆರ್‌ನಿಂದ ಕೈ ಬಿಟ್ಟ ಕ್ರಮವನ್ನು ಕೆಳ ಹಂತದ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಸಿದ್ದಾರೆಂದು ನಟಾಲಿಯಾ ಅವರು ನಾಲ್ಕನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರಲ್ಲದೇ ಕೃಷಿ ವಿವಿ ಕುಲಪತಿ ಸಹಿತ ಅನೇಕರಿಗೆ ಹಾಜರಾಗುವಂತೆ ಸಮನ್ಸ್‌ ಜಾರಿಯಾಗಿದ್ದನ್ನು ಸ್ಮರಿಸಬಹುದು.

1989ರಲ್ಲಿ ನಿಗದಿತ ವಿದ್ಯಾರ್ಹತೆಯಿಲ್ಲದೇ ಪರಿಶಿಷ್ಠರಿಗೆ ಮೀಸಲಾಗಿದ್ದ ಸಹ ಪ್ರಾಧ್ಯಾಪಕ ಹುದ್ದೆ ಪಡೆದಿದ್ದಾರೆಂಬ ಆರೋಪ ಚೆಟ್ಟಿಯವರ ಮೇಲಿದ್ದು ಕೊಲೆ ಯತ್ನದಂತಹ ಗಂಭೀರ ಪ್ರಕರಣವಿದ್ದರೂ ಅದನ್ನು ಮುಚ್ಚಿಟ್ಟು ಕುಲಪತಿ ಹುದ್ದೆಗೆ ಪರಿಗಣಿಸಲಾಯಿತೆಂಬುದನ್ನು ಈಗಾಗಲೇ ಕೃಷಿ ವಿವಿ ಎಸ್‌ಸಿ, ಎಸ್‌ಟಿ ನೌಕರರ ಸಂಘ ಆಪಾದಿಸಿದೆ ಈ ಪ್ರಕರಣವೂ ರಾಜ್ಯಪಾಲರ ಅಂಗಳದಲ್ಲಿದೆ.

ಚೆಟ್ಟಿಯವರ ಕೊಲೆ ಯತ್ನದ ಪ್ರಕರಣದಲ್ಲಿ 2014ರಲ್ಲಿ ನಿರೀಕ್ಷಣಾ ಜಾಮೀನನ್ನೂ ಸಹ ಪಡೆದಿದ್ದೂ ಅಲ್ಲದೇ ಪ್ರತಿ ತಿಂಗಳ ಮೊದಲ ರವಿವಾರ ಠಾಣೆಗೆ 11 ರಿಂದ 5 ರ ಅವಧಿಯಲ್ಲಿ ಹಾಜರಾಗಿ ಸಹಿ ಹಾಕಬೇಕಾಗಿತ್ತು. ಆಗ ಚೆಟ್ಟಿಯವರು ಕೃಷಿ ವಿ.ವಿ.ವಿಸ್ತರಣಾ ನಿರ್ದೇಶಕರಾಗಿದ್ದರು. ಇವೆಲ್ಲವನ್ನೂ ಮುಚ್ಚಿಟ್ಟು ಕುಲಪತಿ ಹುದ್ದೆ ಪಡೆದರೆಂಬುದು ಮೇಲ್ನೋಟಕ್ಕೆ ಸಾಬೀತಾಗುವಂತಿದೆ.

Edited By : Nagaraj Tulugeri
Kshetra Samachara

Kshetra Samachara

19/01/2022 03:08 pm

Cinque Terre

25.78 K

Cinque Terre

0

ಸಂಬಂಧಿತ ಸುದ್ದಿ