ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಟೋ ಚಾಲಕನಿಗೆ ಚಾಕು ಇರಿದ ಪ್ರಕರಣ:ಮೂವರಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ

ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಜಗಳ ತೆಗೆದು ಆಟೋ ಚಾಲಕನೊಬ್ಬನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದ ಪ್ರಕರಣದ ಮೂವರು ಅಪರಾಧಿಗಳಿಗೆ ತಲಾ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 55,500 ರೂ. ದಂಡ ವಿಧಿಸಿ ಇಲ್ಲಿಯ 5ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಇಮಾಮ್ ಮಕಾಂದಾರ, ರಬ್ಬಾಣಿ ಸವಣೂರು ಹಾಗೂ ಮಾಲೂಬ್ ಶಿಗ್ಗಾಂವ ಶಿಕ್ಷೆಗೆ ಒಳಗಾದ ಅಪರಾಧಿಗಳು. ಕರಾಟೆ, ಕಿರಣ ಅಗಸರ ಹಾಗೂ ಸುನೀಲ ದಿಲವಾಲೆ ಅಕ್ಷಯ ಪಾರ್ಕ್‌ನ ರವಿ ನಗರ ರಸ್ತೆಗೆ ಎಗ್‌ರೈಸ್ ತಿನ್ನಲು ಹೋಗಿದ್ದರು. ಅಲ್ಲಿಂದ ಹೊರಟು ಬರುವಾಗ ಆಟೋದಲ್ಲಿ ಬಂದ ಇಮಾಮ್ ಮಕಾಂದಾರ, ರಬ್ಬಾಣಿ, ಸವಣೂರು ಹಾಗೂ ಮಾಲೂಟ ಶಿಗ್ಗಾಂವ ಇವರು ಕಿರಣ ಅಗಸರಿಗೆ ಆಟೋ ಡಿಕ್ಕಿ ಪಡಿಸಿ, ಜಗಳ ತೆಗೆದಿದ್ದರು. ಬಳಿಕ ಅಟೋದಲ್ಲಿದ್ದ ಚಾಕುವಿನಿಂದ ಕಿರಣನ ಎಡ ಪಕ್ಕೆಗೆ ಚುಚ್ಚಿ ಪರಾರಿಯಾಗಿದ್ದರು.

ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 5ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಗಂಗಾಧರ ಅವರು, ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸುಮಿತ್ರಾ ಎಂ. ಅಂಚಟಗೇರಿ ವಾದ ಮಂಡಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

25/11/2021 08:35 am

Cinque Terre

41.23 K

Cinque Terre

6

ಸಂಬಂಧಿತ ಸುದ್ದಿ