ಧಾರವಾಡ: ಮಾಜಿ ಸಚಿವ ಡಿ.ಕೆ.ಶಿವಕುಮಾರ ಆಪ್ತರು ಎನ್ನಲಾದ ಸೀತಾರಾಮ್ ಶೆಟ್ಟಿ ಅವರ ಮನೆ ಮೇಲಿನ ಐಟಿ ದಾಳಿ ಶುಕ್ರವಾರವೂ ಮುಂದುವರೆದಿದೆ. ಇಂದು ಬೆಳ್ಳಂಬೆಳಿಗ್ಗೆ ಸೀತಾರಾಮ್ ಶೆಟ್ಟಿ ಮನೆಗೆ ಮತ್ತೆ ಐಟಿ ಅಧಿಕಾರಿಗಳು ಹಾಜರಾಗಿದ್ದಾರೆ.
ನಿನ್ನೆ ರಾತ್ರಿ 9 ಗಂಟೆಯವರೆಗೂ ವಿಚಾರಣೆ ನಡೆಸಿದ ಅಧಿಕಾರಿಗಳು, ಇಂದು ಮತ್ತೆ ಧಾರವಾಡದ ವಿನಾಯಕನಗರದಲ್ಲಿರುವ ಸೀತಾರಾಮ್ ಶೆಟ್ಟಿ ಮನೆಗೆ ಬಂದು ವಿವಿಧ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಡಿಕೆಶಿ ಆಪ್ತರಾದ ಯು.ಬಿ.ಶೆಟ್ಟಿ ಮನೆ ಮೇಲೆ ನಿನ್ನೆ ದಾಳಿ ನಡೆಸಿದ ನಂತರ ಐಟಿ ಅಧಿಕಾರಿಗಳು, ಯು.ಬಿ.ಶೆಟ್ಟಿ ಅವರ ಸಹೋದರ ಸೀತಾರಾಮ್ ಶೆಟ್ಟಿ ಮನೆ ಮೇಲೂ ದಾಳಿ ನಡೆಸಿ ರಾತ್ರಿವರೆಗೂ ವಿವಿಧ ದಾಖಲೆಪತ್ರಗಳನ್ನು ಪರಿಶೀಲನೆ ನಡೆಸಿದ್ದರು.
Kshetra Samachara
29/10/2021 09:50 am