ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇಸ್ಪೀಟ್ ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್ ಆಡುವುದನ್ನು ನಿಲ್ಲಿಸಿ! ಡಿಸಿಪಿ ಎಚ್ಚರಿಕೆ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡದಲ್ಲಿ ಇಸ್ಪೀಟ್ ಹಾಗೂ ಇನ್ನಿತರ ಅಕ್ರಮವಾಗಿ ನಡೆಸುತ್ತಿರುವ ಮಟ್ಕಾ ಅಡ್ಡೆ ಮೇಲೆ ಈಗಾಗಲೇ ನಮ್ಮ ಪೊಲೀಸ್ ಇಲಾಖೆ ದಾಳಿ ನಡೆಸಿ ಹಲವಾರು ಪ್ರಕರಣ ದಾಖಲಿಸಿ ಆರೋಪಿಗಳ ಬಂಧನ ಮಾಡಲಾಗಿದೆ, ಆದಷ್ಟು ಕ್ರೈಮ್ ಪ್ರಕರಣಗಳನ್ನು ಹತೋಟಿ ತರುವ ಉದ್ದೇಶ ಹೊಂದಿದ್ದೇವೆ ಎಂದು ಡಿಸಿಪಿ ಕೆ.ರಾಮರಾಜನ್ ಹೇಳಿದರು.

ನಗರದಲ್ಲಿಂದು ಮಾತಾನಾಡಿದ ಅವರು, ಜಿಲ್ಲೆಯಲ್ಲಿ ಆನ್ಲೈನ್ ಮಟ್ಕಾ ದಂದೆ ಹಾಗೂ ಕ್ರಿಕೆಟ್ ಬೆಟ್ಟಿಂಗ್ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಎಲ್ಲವನ್ನೂ ನಾವೂ ಸಂಪೂರ್ಣವಾಗಿ ತಡೆಗಟ್ಟಲು ಸಾದ್ಯವಿಲ್ಲ ಆದರೂ ನಮ್ಮ ಸಿಬ್ಬಂದಿಗಳು ಹಗಲು ರಾತ್ರಿ ಆರೋಪಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಯುವಕರು ಸಹ ಯಾವುದೇ ಕಾರಣಕ್ಕೂ ಮಟ್ಕಾ ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟನಂತಹ ಮಾರಕ ಆಟಗಳಿಗೆ ಮೊರೆ ಹೋಗಬಾರದು ಎಂದು ಸಲಹೆ ಜೊತೆಗೆ ಎಚ್ಚರಿಕೆ ನೀಡಿದರು.

Edited By : Manjunath H D
Kshetra Samachara

Kshetra Samachara

04/10/2021 09:54 am

Cinque Terre

82.46 K

Cinque Terre

15

ಸಂಬಂಧಿತ ಸುದ್ದಿ