ಗದಗ: ಹಗಲು ದರೋಡೆ ಮಾಡುತ್ತಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ. ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಹೌದು..ಲಕ್ಷ್ಮೇಶ್ವರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಳ್ಳತನ ಮಾಡಿದ ಆರೋಪಿ ಶಿವಕುಮಾರ್ ಗರಡ್ಡಿ ಎಂಬುವವನೇ ಬಂದಿತ ಆರೋಪಿಯಾಗಿದ್ದಾನೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ನಿವಾಸಿಯಾಗಿರುವ ಶಿವಕುಮಾರ್ ಗರಡ್ಡಿ ಲಕ್ಷ್ಮೇಶ್ವರದಲ್ಲಿ ಹಲವಾರು ಮನೆಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಬೆನ್ನಲ್ಲೇ ಕಳ್ಳನಿಗಾಗಿ ಬಲೆ ಬಿಸಿದ್ದ ಪೊಲೀಸರು ಆರೋಪಿಯಿಂದ ಮೌಲ್ಯ ಸುಮಾರು 6 ಲಕ್ಷ 50 ಸಾವಿರಕ್ಕೂ ಅಧಿಕ ಮೌಲ್ಯದ 153 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ.
ಇನ್ನೂ ಗದಗ, ಲಕ್ಷ್ಮೇಶ್ವರ, ಗುಡಗೇರಿ ಭಾಗದಲ್ಲಿ ಕಳ್ಳತನ ಮಾಡಿದ ಆರೋಪಿ ಶಿವಕುಮಾರನನ್ನು ಗದಗ ಎಸ್ಪಿ ಯತೀಶ್ ಎನ್ ಮಾರ್ಗದರ್ಶನದಲ್ಲಿ ಸಿಪಿಐ ವಿಕಾಸ ಲಮಾಣಿ, ಪಿಎಸ್ ಐ ಪ್ರಕಾಶ್ ಡಿ ನೇತೃತ್ವದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದಿದ್ದು,ಲಕ್ಷ್ಮೇಶ್ವರ ಪೊಲೀಸ್ ಕಾರ್ಯಾಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
25/09/2021 09:28 pm