ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸರ್ಕಾರಿ ಜಮೀನು ತೋರಿಸಿ ಬೆಳೆವಿಮೆ, ಬೆಳೆ ಪರಿಹಾರ ಪಡೆದ ಭೂಪರು

ಧಾರವಾಡ: ಅಕ್ರಮಗಳಿಗೆ ಕಡಿವಾಣ ಹಾಕಲು ಸರ್ಕಾರ ಎಷ್ಟೇ ಹೊಸ ಬಗೆಯ ತಂತ್ರಜ್ಞಾನದ ಮೊರೆ ಹೋದರೂ, ಅಕ್ರಮವೆಸಗುವವರು ಮಾತ್ರ ಬೇರೆ ದಾರಿ ಮೂಲಕ ಹಣ ನುಂಗುವ ಕೆಲಸ ಮಾಡುತ್ತಲೇ ಇದ್ದಾರೆ. ಸರ್ಕಾರ ಚಾಪೆ ಕೆಳಗೆ ನುಸುಳಿದರೆ, ಅಕ್ರಮವೆಸಗುವವರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ನಡೆದಿರುವ ಘಟನೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನೇ ತಮಗೆ ಬೇಕಾದಂತೆ ಬಳಸಿಕೊಂಡು, ಹಣ ಲೂಟಿ ಮಾಡಿರುವ ಘಟನೆ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ನಡೆದಿದೆ.

ಸರ್ಕಾರಿ ಭೂಮಿಯನ್ನು ತಮ್ಮ ಭೂಮಿ ಎಂದು ತೋರಿಸಿದ ಭೂಪರು, ಪ್ರಧಾನ ಮಂತ್ರಿ ಫಸಲ್ ಭಿಮಾ ವಿಮೆಯನ್ನು ಪಡೆದುಕೊಂಡಿದ್ದಾರೆ. ಗ್ರಾಮದ ಸರ್ಕಾರಿ ಸರ್ವೆ ನಂಬರ್ 48/1 ರಲ್ಲಿ 61 ಎಕರೆ 34 ಗುಂಟೆ ಎಕರೆ ಸರ್ಕಾರಿ ಜಮೀನು ಇದ್ದು, ಈ ಜಮೀನನ್ನು ತಮ್ಮ ಜಮೀನು ಎಂದು ತೋರಿಸಿದ 13 ಜನ ಬೆಳೆವಿಮೆ ತುಂಬಿದ್ದಾರೆ. ಈ ಪೈಕಿ ಇಬ್ಬರು ಬೆಳೆ ಪರಿಹಾರ ಕೂಡ ಪಡೆದಿದ್ದಾರೆ. ಇದರಲ್ಲಿ ಒಬ್ಬ ಗ್ರಾಮ ಪಂಚಾಯ್ತಿ ಸದಸ್ಯ ಕೂಡ ಇದ್ದಾನೆ ಎಂಬುದು ಗೊತ್ತಾಗಿದೆ.

ಈ ಘಟನೆ ಸಂಬಂಧ ಜಿಲ್ಲಾಡಳಿತಕ್ಕೆ ದೂರು ನೀಡಿದ ಮಾಹಿತಿ ಹಕ್ಕು ಕಾರ್ಯಕರ್ತ ನಾಗಾನಂದ ಗುಂಡಗೋವಿ ಅವರೇ ವಿವರವಾಗಿ ಹೇಳ್ತಾರೆ ಕೇಳಿ

ಈ ಘಟನೆ ಸಂಬಂಧ ತನಿಖೆ ನಡೆಸಲು ಉಪವಿಭಾಗಾಧಿಕಾರಿಗಳು ಆದೇಶಿಸಿದ್ದಾರೆ. ಸದ್ಯ ಈ ಭೂಮಿ ಸಂಪೂರ್ಣವಾಗಿ ಸರ್ಕಾರದ ಅಧೀನದಲ್ಲೇ ಇದೆ. ಆದರೆ ಇದೇ ಸರ್ವೇ ನಂಬರ್​ನಲ್ಲಿ ತಮ್ಮ ಜಮೀನಿದ್ದು, ಅದರಲ್ಲಿ ಭತ್ತ ಬೆಳೆದಿದ್ದೇವೆ ಎಂದು ದಾಖಲೆ ಸೃಷ್ಟಿಸಿದ್ದಾರೆ. ಕಂಪ್ಯೂಟರ್ ಕೇಂದ್ರದಲ್ಲಿ ಕುಳಿತು ಈ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರವನ್ನೇ ಯಾಮಾರಿಸಿದ್ದಾರೆ.

ಈಗಂತೂ ಜಿಪಿಎಸ್ ಮೂಲಕವೇ ಎಲ್ಲವೂ ನಡೆಯುವುದರಿಂದ ಯಾವ ಸರ್ವೆ ನಂಬರ್​ನಲ್ಲಿ ಯಾವ ಬೆಳೆ ಇದೆ ಎನ್ನುವುದು ಕೂಡ ಗೊತ್ತಾಗುತ್ತದೆ. ಒಟ್ಟಾರೆಯಾಗಿ ಸರ್ಕಾರ ರೈತರ ಅನುಕೂಲಕ್ಕೆ ಎಂದು ಬೆಳೆ ವಿಮೆ ಯೋಜನೆ ಜಾರಿಗೆ ತಂದರೆ, ಅದರ ಮೂಲಕವೇ ಇಂಥವರು ಕೊಳ್ಳೆ ಹೊಡೆಯುತ್ತಿದ್ದಾರೆ. ಇಂಥವರ ಮೇಲೆ ಕಾನೂನು ಕ್ರಮ ಜರುಗಿಸಿ, ಅಕ್ರಮಗಳನ್ನು ತಡೆಯುವ ಕಡೆಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕಿದೆ.

Edited By : Nagesh Gaonkar
Kshetra Samachara

Kshetra Samachara

18/08/2021 03:17 pm

Cinque Terre

41.39 K

Cinque Terre

8

ಸಂಬಂಧಿತ ಸುದ್ದಿ