ಧಾರವಾಡ: ಧಾರವಾಡದ ಸುವರ್ಣ ಪೆಟ್ರೋಲ್ ಬಂಕ್ ಬಳಿ ಲಾರಿ ಚಾಲಕನನ್ನು ಅಡ್ಡಗಟ್ಟಿ ನಗದು ಹಾಗೂ ಮೊಬೈಲ್ ದೋಚಿದ್ದ ಇಬ್ಬರು ಖದೀಮರನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಧಾರವಾಡದ ಕಂಠಿಗಲ್ಲಿ ನಿವಾಸಿ ಮಹ್ಮದ್ ಅಬ್ಬಾಸ್ ಅಬ್ದುಲ್ ಗನಿ ಹಾಗೂ ಮಹ್ಮದ್ ಆಸೀಫ್ ಮುಲ್ಲಾ ಎಂಬುವವರೇ ಬಂಧಿತ ಆರೋಪಿಗಳು. ಇವರು ಇತ್ತೀಚೆಗೆ ಧಾರವಾಡದ ಸುವರ್ಣ ಪೆಟ್ರೋಲ್ ಬಂಕ್ ಬಳಿ ಆಟೊ ಮೂಲಕ ಬಂದು ಲಾರಿ ಚಾಲಕನನ್ನು ತಡೆದು ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.
ಸದ್ಯ ಆರೋಪಿತರನ್ನು ಬಂಧಿಸಲಾಗಿದ್ದು, ಅವರಿಂದ ಒಂದು ಆಟೊ, 1,60,300 ಮೌಲ್ಯದ ಮೊಬೈಲ್ ಹಾಗೂ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
Kshetra Samachara
01/03/2021 01:05 pm