ಧಾರವಾಡ: ವಕೀಲರನ್ನು ಎಳೆದಾಡಿದ್ದಾರೆ ಎಂಬ ಕಾರಣಕ್ಕೆ ಸುದ್ದಿಯಾಗಿದ್ದ ಪ್ರಭು ಸೂರಿನ ಅವರನ್ನು ಇತ್ತೀಚೆಗಷ್ಟೇ ಕಲಘಟಗಿ ಪೊಲೀಸ್ ಠಾಣೆಗೆ ವರ್ಗಾವಾಣೆ ಮಾಡಲಾಗಿದೆ. ಆದರೆ, ಇದೀಗ ಅಲ್ಲಿಯೂ ಪ್ರಭು ಸೂರಿನ ಅವರು ಸುದ್ದಿಯಾಗಿದ್ದಾರೆ.
ಕಲಘಟಗಿ ಪೊಲೀಸ್ ಠಾಣೆಗೆ ವರ್ಗಾವಣೆಯಾದ ಕೂಡಲೇ ದಲಿತರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಪ್ರಭು ಸೂರಿನ ಅವರ ಮೇಲೆ ಕೇಳಿ ಬಂದಿದೆ.
ಕಲಘಟಗಿ ಅರಣ್ಯ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಅವರಿಂದ ನಾಡ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಆದರೆ, ಈ ಪ್ರಕರಣದಲ್ಲಿ ಆರೋಪಿತನಲ್ಲದ ಡೇವಿಡ್ ಎನ್ನುವ ವ್ಯಕ್ತಿಯನ್ನು ಬಂಧಿಸಿ ವಿನಾಕಾರಣ ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದಲಿತ ಸಂಘಟನೆ ಸದಸ್ಯರು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಲಘಟಗಿ ಪೊಲೀಸ್ ಠಾಣೆಯ ಸಿಬ್ಬಂದಿ ಮನ ಬಂದಂತೆ ಥಳಿಸಿದ್ದು, ಇದಕ್ಕೆ ನೇರವಾಗಿ ಇನ್ ಸ್ಪೆಕ್ಟರ್ ಪ್ರಭು ಸೂರಿನ ಅವರೇ ಕಾರಣ ಹೀಗಾಗಿ ಅವರನ್ನು ತಕ್ಷಣ ವಜಾ ಮಾಡಿ ನಿರಪರಾಧಿಗಳಿಗೆ ನ್ಯಾಯ ಒಡಗಿಸಬೇಕೆಂದು ಎಸ್ಪಿ ಕೃಷ್ಣಕಾಂತ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
Kshetra Samachara
28/01/2021 02:34 pm